ಬೆಂಗಳೂರು: ದಿವಂಗತ ನಟ ಗುರುಪ್ರಸಾದ್ ಅವರು ನಟಿಸಿದ್ದ ‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿದೆ. ಗುರುಪ್ರಸಾದ್ ಅವರ 2ನೇ ಪತ್ನಿ ನ್ಯಾಯಾಲಯದ ಮೊರೆ ಹೋಗಿ, ಸಿನಿಮಾ ಬಿಡುಗಡೆಗೆ ತಡೆ ತಂದಿದ್ದಾರೆ.
ಸಿನಿಮಾದ ಹೆಸರಿನ ವರ್ಗಾವಣೆ ಪ್ರಕ್ರಿಯೆ ಕುರಿತು ಗುರುಪ್ರಸಾದ್ 2ನೇ ಪತ್ನಿ ಸುಮಿತ್ರಾ ನ್ಯಾಯಾಲಯದ ಮೊರೆ ಹೋದ ಕಾರಣ ಸಿಟಿ ಸಿವಿಲ್ ನ್ಯಾಯಾಲಯವು ‘ಎದ್ದೇಳು ಮಂಜುನಾಥ 2’ ಸಿನಿಮಾ ಬಿಡುಗಡೆ ಮಾಡದಂತೆ ತಡೆ ನೀಡಿದೆ. ಇದು ಗುರುಪ್ರಸಾದ್ ನಟಿಸಿರುವ ಕೊನೆಯ ಸಿನಿಮಾ ಆಗಿದೆ.