ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್ ಮಾಡಿ ಅರೆಸ್ಟ್ ಆಗಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬಸವೇಶ್ವರ ನಗರ ಪೊಲೀಸರು ನಿನ್ನೆ ಮಧ್ಯರಾತ್ರಿಯೇ ಅವರನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಲಾಂಗ್ ಹಿಡಿದು 18 ಸೆಕೆಂಡ್ಗಳ ಕಾಲ ರೀಲ್ಸ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಇವರನ್ನು ನಿನ್ನೆ ಮಧ್ಯಾಹ್ನ ಬಂಧಿಸಿದ್ದರು. ಆದರೆ ಮಧ್ಯರಾತ್ರಿಯೇ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ತಾವು ರೀಲ್ಸ್ಗೆ ಬಳಸಿರುವುದು ಫೈಬರ್ ಮಚ್ಚು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರೀಲ್ಸ್ನಲ್ಲಿ ಬಳಸಿದ್ದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮಾತನ್ನೇ ನಂಬಿ ಫೈಬರ್ ಮಚ್ಚು ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಬೆಳಗ್ಗೆ 10:30 ಕ್ಕೆ ಬರುವಂತೆ ನೋಟಿಸ್ ನೀಡಿ ಆರೋಪಿಗಳನ್ನು ಪೊಲೀಸರು ಕಳುಹಿಸಿದ್ದರು. ಸಾಮಾನ್ಯ ಜನರು ಇದ್ದಿದ್ದರೆ ಇದೇ ರೀತಿ ಮಾಡುತ್ತಿದ್ದರಾ ಪೊಲೀಸರು ಎಂಬ ಪ್ರಶ್ನೆ ವ್ಯಕ್ತವಾಗಿದೆ.