ದೆಹಲಿ; ದೇಶದ ಹಿರಿಯ ರೈತ ನಾಯಕ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನಿಧನರಾಗಿದ್ದಾರೆ.
ಅವರು ತಮ್ಮ 89ನೇ ವಯಸ್ಸಿನಲ್ಲಿ ಗುರುಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಮಾಜಿ ಉಪಪ್ರಧಾನಿ ದಿ. ದೇವಿ ಲಾಲ್ ಅವರ ಪುತ್ರರಾಗಿದ್ದ ಚೌಟಾಲಾ, ಹರಿಯಾಣದ 7ನೇ ಮುಖ್ಯಮಂತ್ರಿಯಾಗಿದ್ದರು. ಒಟ್ಟು 4 ಬಾರಿ ಹರಿಯಾಣದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಮೊಮ್ಮಗ ದುಶ್ಯಂತ್ ಚೌಟಾಲಾ ಕೂಡ ಹರಿಯಾಣದ ಉಪ ಮುಖ್ಯಮಂತ್ರಿಯಾಗಿದ್ದರು.