ಪಣಜಿ : ಗೋವಾದ ಕೃಷಿ ಸಚಿವ, ಮಾಜಿ ಮುಖ್ಯಮಂತ್ರಿ ರವಿ ನಾಯ್ಕ(79) ಅವರು ಮಂಗಳವಾರ ಮಧ್ಯರಾತ್ರಿ ಹೃದಯಸ್ತಂಭನದಿಂದ ಕೊನೆಯುಸಿರೆಳದಿದ್ದಾರೆ ಎಂದು ತಿಳಿದುಬಂದಿದೆ.
ಪಣಜಿಯಿಂದ 30 ಕಿ.ಮೀ. ದೂರದ ನಿವಾಸದಲ್ಲಿ ರವಿ ನಾಯ್ಕ ಅವರಿಗೆ ಹೃದಯಸ್ತಂಭನವಾಗಿತ್ತು. ಬಳಿಕ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತು. ಆದರೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.
ರವಿ ನಾಯ್ಕ್ ಅವರು 2 ಬಾರಿ ಸಿಎಂ ಆಗಿ, 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬುಧವಾರ ಸಂಜೆ ಮೂರು ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ. ರವಿ ನಾಯ್ಕ ಅವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ಸ್ವಗೃಹಕ್ಕೆ ತರಲಾಗಿದೆ.
ರವಿ ನಾಯ್ಕ್ ನಿಧನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. “ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಕೊಡುಗೆ ಗಮನಾರ್ಹ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸಚಿವ ರವಿ ನಾಯ್ಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದೀನದಲಿತರ ಸಬಲೀಕರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರವಿ ನಾಯ್ಕ್, ಗೋವಾದ ಅಭಿವೃದ್ಧಿ ಪಥವನ್ನು ಹೆಚ್ಚು ಶ್ರೀಮಂತಗೊಳಿಸಿದ ಅನುಭವಿ ಆಡಳಿತಗಾರ. ಅಲ್ಲದೇ ಸಾರ್ವಜನಿಕರ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು” ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ.