ದೆಹಲಿ: ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ರಾಬಿನ್ ಸ್ಮಿತ್ (62) ನಿಧನರಾಗಿದ್ದಾರೆ. ಅವರ ಕುಟುಂಬ ಹಾಗೂ ಮಾಜಿ ಕೌಂಟಿ ಹ್ಯಾಂಪ್ಶೈರ್ ತಂಡವು ಅವರ ನಿಧನದ ಸುದ್ದಿ ತಿಳಿದು ಆಘಾತಕ್ಕೊಳಗಾಗಿದೆ ಎಂದು ತಿಳಿಸಿದ್ದಾರೆ.
1988-1996ರ ನಡುವೆ ಸ್ಮಿತ್ ಇಂಗ್ಲೆಂಡ್ ಪರ 62 ಟೆಸ್ಟ್ ಮತ್ತು 71 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಂಡಕ್ಕೆ ಕಷ್ಟಕರವಾದ ಸಮಯದಲ್ಲಿ ಉತ್ತಮವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರು, ಒಟ್ಟು 13 ಶತಕ ಸೇರಿದಂತೆ 43.67 ಸರಾಸರಿಯಲ್ಲಿ ಒಟ್ಟಾರೆ 4,236 ರನ್ಗಳನ್ನು ಗಳಿಸಿದ್ದಾರೆ.
































