ಬೆಂಗಳೂರು: ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಒಡ್ಡಲಾಗಿದೆ.ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು, ಈ ಬಗ್ಗೆ ಅನಂತ ಕುಮಾರ್ ಹೆಗಡೆ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜೂನ್ 24ರಂದು ಅನಂತ ಕುಮಾರ್ ಹೆಗಡೆ ಅವರಿಗೆ ಇ-ಮೇಲ್ ಮೂಲಕ ಜೀವ ಬೆದರಿಕೆ ಸಂದೇಶ ಬಂದಿತ್ತು.ನ್ಯಾಯಾಲಯದ ಅನುಮತಿ ಮೇರೆಗೆ ಜು.18 ದೂರು ದಾಖಲಿಸಲಾಗಿದೆ. ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಅವರಿಗೆ ಈ ಹಿಂದೆ ಸಹ ಜೀವ ಬೆದರಿಕೆ ಸಂದೇಶ ಬಂದಿತ್ತು.
ಈ ಹಿಂದೆ ಅಪರಿಚಿತ ವ್ಯಕ್ತಿಯೋರ್ವ ಅನಂತ ಕರ್ಮಾ ಹೆಗಡೆ ಅವರಿಗೆ ತಡರಾತ್ರಿ 2 ಗಂಟೆ ಸುಮಾರಿಗೆ ಕರೆ ಮಾಡಿ, ನೀನು ಅನಂತ ಕುಮಾರ ಹೆಗಡೆ, ಬಿಜೆಪಿ ಪಕ್ಷದ ಸಂಸದ… ಹೌದು ತಾನೆ? ನಾನು ಹಿಂದಿನ ಬಾರಿ ಕರೆ ಮಾಡಿದ್ದಾಗ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೆ. ಈ ಬಾರಿ ಏನು ಮಾಡುತ್ತೀಯಾ? ನೀನು ಪೊಲೀಸರಿಗೆ ದೂರು ನೀಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು ಎಂದು ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದ.