ನವದೆಹಲಿ : ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಂಧನ ಅವಧಿಯನ್ನು ನ್ಯಾಯಾಲಯ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ.
ಬೆಳಿಗ್ಗೆ 9:30ಕ್ಕೆ ಹಿಸಾರ್ ಪೊಲೀಸರು ಜ್ಯೋತಿಯನ್ನು ನ್ಯಾಯಾಲಯಕ್ಕೆ ಕರೆತಂದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಯಿತು. ನಂತರ ಹಿಸಾರ್ ಪೊಲೀಸರು ಆಕೆಯನ್ನು 4 ದಿನಗಳ ಕಸ್ಟಡಿಗೆ ಪಡೆದರು. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾಳನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ.
ಜ್ಯೋತಿ ಪರವಾಗಿ ಪ್ರಕರಣದ ವಾದ ಮಂಡಿಸಲು ಇನ್ನೂ ಯಾವುದೇ ವಕೀಲರನ್ನು ನೇಮಿಸಲಾಗಿಲ್ಲ. ಜ್ಯೋತಿಯ ತಂದೆ ಹರೀಶ್ ಮಲ್ಹೋತ್ರಾ ಮಾತನಾಡಿ, ನನ್ನ ಬಳಿ ವಕೀಲರನ್ನು ನೇಮಿಸಿಕೊಳ್ಳಲು ಹಣವಿಲ್ಲ ಎಂದು ಹೇಳಿದ್ದಾರೆ. ನನಗೆ ವಕೀಲರನ್ನು ಹೇಗೆ ನೇಮಿಸಿಕೊಳ್ಳಬೇಕೆಂದು ತಿಳಿದಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಇಲಾಖೆಗಳು ಜ್ಯೋತಿ ಮಲ್ಹೋತ್ರಾಳನ್ನು ಪೊಲೀಸ್ ಕಸ್ಟಡಿಯಲ್ಲಿ ಮೂರು ದಿನಗಳ ಕಾಲ ವಿಚಾರಣೆ ಮುಂದುವರಿಸಿವೆ.