ಭಟ್ಕಳ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ನಾಲ್ವರು ಮೀನುಗಾರರು ನೀರುಪಾಲಾದ ಘಟನೆ ನಡೆದಿದೆ. ತೆಂಗಿನಗುಂಡಿಯ ಬಂದರಿನಿಂದ ಮಹಾಸತಿ ಗಿಲ್ ನೆಟ್ ದೋಣಿಯಲ್ಲಿ ಆರು ಜನರು ಮೀನುಗಾರಿಕೆಗೆ ತೆರಳಿದ್ದರು.
ಮನೋಹರ ಈರಯ್ಯ ಮೊಗೇರ, ರಾಮಯ್ಯ ಮಾಸ್ತಿ ಖಾರ್ವಿ ಎನ್ನುವವರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಇವರು ತೆಂಗಿನಗುಂಡಿಯ ಬಂದರಿನಿಂದ ಮಹಾಸತಿ ಗಿಲ್ ನೆಟ್ ದೋಣಿಯಲ್ಲಿ ಆರು ಜನ ಮೀನುಗಾರಿಕೆಗೆ ತೆರಳಿದ್ದರು.
ಕರಾವಳಿ ಕಾವಲು ಪಡೆ ಸಿಬ್ಬಂದಿ, ಮೀನುಗಾರರು, ಪೊಲೀಸ್ ಇಲಾಖೆಯ ಸಿಬ್ಬಂದಿ ನಾಪತ್ತೆಯಾದವರಿಗೆ ಹುಡುಕಾಟ ನಡೆಸುತ್ತಿದ್ದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.