ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಡ ಅನೂಪ್, ಹೆಂಡತಿ ರಾಖಿ ಸೇರಿ ಇಬ್ಬರು ಮಕ್ಕಳು ನೇಣಿಗೆ ಶರಣಾಗಿದ್ದಾರೆ. ಅನ್‌ಲೈನ್ ವ್ಯಾಪಾರ ಮಾಡ್ತಿದ್ದ ಅನೂಪ್ ಬ್ಯುಸಿನೆಸ್ ಲಾಸ್ ಆಗಿ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ನಿರ್ಧಾರ ಮಾಡಿರೋ ಶಂಕೆ ವ್ಯಕ್ತವಾಗಿದೆ. ಇಬ್ಬರು ಮಕ್ಕಳಾದ ಅನುಪ್ರಿಯಾ, ಪ್ರಿಯಾನ್ಸು ಕೂಡ ಸಾವನ್ನಪ್ಪಿದ್ದಾರೆ. ಸದ್ಯ ಘಟನ ಸ್ಥಳಕ್ಕೆ ಸದಶಿವನಗರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.