ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ಇದೇ ಜುಲೈ 25ರಂದು ವಿಶ್ವ ಮೆದುಳು ದಿನದ ಪ್ರಯುಕ್ತ ಉಚಿತ ನರರೋಗ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರಕ್ಕೆ ನರರೋಗ ತಜ್ಞರಾದ ಡಾ.ಕಿರಣ್ ಗೌಡ ಆಗಮಿಸಲಿದ್ದು, ತಲೆನೋವು, ಅಪಸ್ಮಾರ, ಪಾಶ್ರ್ವವಾಯು, ಮರೆವಿನ ಖಾಯಿಲೆ ಹಾಗೂ ನರರೋಗ ಸಂಬಂಧಿಸಿದ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ರೋಗಿಗಳು ಹಾಗೂ ಸಾರ್ವಜನಿಕರು ಉಚಿತ ನರರೋಗ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆಯಬಹುದು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.