ಬೆಂಗಳೂರು: ಬಹುತೇಕ ಹುಡುಗಿಯರು ತಮ್ಮ ಸಂಗಾತಿಯಿಂದ ಪ್ರೀತಿ ಭರವಸೆ, ಕಾಳಜಿ, ಮತ್ತು “ಐ ಲವ್ ಯೂ” ಎಂಬ ಪ್ರೀತಿಯ ಮಾತು ಕೇಳಲು ಇಚ್ಛಿಸುತ್ತಾರೆ. ಆದರೆ ಹುಡುಗರ ಮನಸ್ಥಿತಿ ಇದಕ್ಕೆ ಭಿನ್ನವಾಗಿದೆ. ಪದೇ ಪದೇ ಪ್ರೀತಿಯನ್ನು ವ್ಯಕ್ತಪಡಿಸುವುದು ಅನಗತ್ಯ ಎಂದು ಹಲವಾರು ಹುಡುಗರು ಭಾವಿಸುತ್ತಾರೆ ಎಂದು ಸಂಬಂಧ ತಜ್ಞರು ವಿಶ್ಲೇಷಿಸುತ್ತಾರೆ.
ಒಂದೇ ಮಾತನ್ನು ನಿರಂತರವಾಗಿ ಹೇಳಿದರೆ ಅದರ ಮಹತ್ವ ಕಳೆದುಕೊಳ್ಳುತ್ತದೆ ಎಂಬುದಾಗಿ ಕೆಲವರು ಮನಸ್ಸಿನಲ್ಲಿ ನಂಬಿಕೊಂಡಿದ್ದಾರೆ. “ನಾನು ನೂರು ಬಾರಿ ‘ಐ ಲವ್ ಯೂ’ ಹೇಳಿದರೂ, ಅವನು ಒಮ್ಮೆ ಕೂಡಾ ಹೇಳುವುದಿಲ್ಲ” ಎಂಬುದು ಹಲವಾರು ಹುಡುಗಿಯರ ದೂರು. ಆದರೆ ಹುಡುಗರ ಪ್ರೀತಿಯ ಅಭಿವ್ಯಕ್ತಿಯ ಮಾದರಿ ಭಿನ್ನವಾಗಿರುತ್ತದೆ.
ಹುಡುಗರ ಮನಸ್ಥಿತಿ ಏಕೆ ಹೀಗಿದೆ?
>ನಾಚಿಕೆ ಸ್ವಭಾವ: ಕೆಲವರು ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಯುತ್ತಾರೆ.
>ಪ್ರತಿಯೊಂದು ಮಾತಿಗೂ ಅರ್ಥ ಇರಬೇಕು ಎಂಬ ನಂಬಿಕೆ: ಪದೇ ಪದೇ ಹೇಳುವುದರಿಂದ ಮಾತಿನ ಮಹತ್ವ ಕಡಿಮೆಯಾಗಬಹುದು ಎಂದು ಕೆಲವರು ಭಾವಿಸುತ್ತಾರೆ.
>ಪ್ರೀತಿ ಕೇವಲ ಮಾತಲ್ಲ, ಕರ್ಮದಲ್ಲಿದೆ: ಕೆಲವು ಹುಡುಗರು ಪ್ರೀತಿಯನ್ನು ತಮ್ಮ ನಡವಳಿಕೆಯಲ್ಲಿ ತೋರಿಸುತ್ತಾರೆ – ಕಾಳಜಿ, ಬೆಂಬಲ, ರಕ್ಷಣೆ ಇತ್ಯಾದಿಗಳ ಮೂಲಕ.
>ಗೋಪ್ಯತೆ ಮುಖ್ಯ: ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುವುದು ಇಷ್ಟವಿಲ್ಲದ ಹುಡುಗರ ಸಂಖ್ಯೆಯೂ ಕಡಿಮೆಯಿಲ್ಲ.
ಹುಡುಗಿಯರು ಸಂಗಾತಿಯ ಮಾತಿಗಿಂತ ಅವರ ನಡವಳಿಕೆ ಮತ್ತು ಕಾಳಜಿಯತ್ತ ಗಮನ ಕೊಡುವುದು ಸಂಬಂಧವನ್ನು ಬಲಪಡಿಸಬಹುದು. ಪ್ರೀತಿಯ ವ್ಯಕ್ತೀಕರಣ ಪ್ರತಿ ವ್ಯಕ್ತಿಯೊಬ್ಬರಿಗೂ ವಿಭಿನ್ನವಾಗಿರುತ್ತವೆ ಎಂಬ ಅಂಶವನ್ನು ಎರಡೂಪಕ್ಷಗಳೂ ಅರ್ಥ ಮಾಡಿಕೊಳ್ಳುವುದು ಮುಖ್ಯ.