ಇನ್ಮುಂದೆ ಸೌರ ವಿದ್ಯುತ್ ಬಳಕೆ ಮಾಡಿಕೊಂಡು ದೋಣಿಗಳು ದೇಶದಲ್ಲಿ ಸಂಚರಿಸಲಿವೆ. ಮುಂದಿನ 5 ವರ್ಷಗಳಲ್ಲಿ 1000 ದೋಣಿಗಳು ಸೌರ ವಿದ್ಯುತ್ ಅಥವಾ ಹಸಿರು ಇಂಧನವನ್ನು ಬಳಕೆ ಮಾಡಿಕೊಂಡು ಸಂಚರಿಸಲಿವೆ. ಈ ಬಗ್ಗೆ ಅಸ್ಸಾಂನ ಕಾಜಿರಂಗದಲ್ಲಿ ನಡೆದ ಒಳನಾಡು ಜಲಸಾರಿಗೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ವಾನಂದ ಸೋನೋವಾಲ್ ಹೇಳಿದ್ದಾರೆ.
ಅಸ್ಸಾಂನ ಗುವಾಹಟಿ, ಕರ್ನಾಟಕದ ಮಂಗಳೂರು ಸೇರಿದಂತೆ ದೇಶದ 15 ನಗರಗಳಲ್ಲಿ ಕೇರಳದ ಕೊಚ್ಚಿಯಲ್ಲಿ ಅನುಷ್ಠಾನಗೊಳಿಸಲಾಗಿರುವ “ವಾಟರ್ ಮೆಟ್ರೋ’ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತದೆ ಎಂದು ಸೋನೋ ವಾಲ್ ಹೇಳಿದ್ದಾರೆ. ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಬಂದರುಗಳಲ್ಲಿ 60 ಹೊಸ ಹಡಗುಕಟ್ಟೆಗಳನ್ನು ನಿರ್ಮಿಸಲಾಗುತ್ತದೆ. ಅಗ್ಗದ ಸರಕು ಸಾಗಣೆಗಾಗಿ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ 50000 ಕೋಟಿ ರೂ. ಹೂಡಿಕೆ ಮಾಡಲಿದೆ. ಕೇರಳದಲ್ಲಿ ಈಗಾಗಲೇ ಸೌರ ವಿದ್ಯುತ್ ಚಾಲಿತ ಬೋಟ್ ಸೇವೆ ನೀಡುತ್ತಿದೆ.