ಚಿತ್ರದುರ್ಗ: ಇಂದಿನಿಂದ .4ರಿಂದ 12ರವರೆಗೆ ಸಿರಿಗೆರೆಯ ತರಳಬಾಳು ಬೃಹನ್ಮಠದಿಂದ ತರಳಬಾಳು ಹುಣ್ಣಿಮೆ’ ಮಹೋತ್ಸವ ತಾಲ್ಲೂಕಿನ ಭರಮಸಾಗರದಲ್ಲಿ ನಡೆಯಲಿದೆ.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭಕ್ಕೆ 200 ಎಕರೆ ಪ್ರದೇಶದಲ್ಲಿ ನೂತನ ಮಹಾಮಂಟಪ, ಸಭಾವೇದಿಕೆ, ಪುಸ್ತಕ ಮಾರಾಟ ಮಳಿಗೆ, ಕೃಷಿ ಪ್ರದರ್ಶನ ಮಳಿಗೆ, ಕ್ರೀಡಾ ಅಂಕಣಗಳು ಹಾಗೂ ಕುಸ್ತಿ ಅಖಾಡ ಸಿದ್ದಗೊಂಡಿದೆ.
ಮಹೋತ್ಸವದಲ್ಲಿ ಮಠಾಧೀಶರು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಫೆ.4ರಂದು ಸಂಜೆ 4.30ಕ್ಕೆ ಭರಮಸಾಗರದ ಭರಮಣ್ಣ ನಾಯಕನ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಆ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಉತ್ಸವದ ಅಂಗವಾಗಿ ಶ್ರೀಗಳು ಹುತಾತ್ಮ ವೀರಯೋಧರ ಕುಟುಂಬಗಳ ಸದಸ್ಯರಿಗೆ ತಲಾ ₹1 ಲಕ್ಷ ಆರ್ಥಿಕ ನೆರವು ನೀಡಲಿದ್ದಾರೆ.