ಚಿತ್ರದುರ್ಗ : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಚನ್ನಕೇಶವಸ್ವಾಮಿಯ ರಥೋತ್ಸವ ಹಾಗೂ ಕಲ್ಯಾಣೋತ್ಸವ ಫೆ.11 ಮತ್ತು 12 ರಂದು ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಅಂಕುರಾರ್ಪಣ, ಧ್ವಜಾರೋಹಣ, ಕಲಶ ಸ್ಥಾಪನೆ, ನವಗ್ರಹ ಪೂಜೆ, ಹೋಮ, ವಾಸ್ತು ಶಾಂತಿ ಹೋಮ, ರಾಕ್ಷೋಘ್ನ ಹೋಮ, ಮಧ್ಯಾಹ್ನ 3-30 ರಿಂದ 5-30 ರವರೆಗೆ ಕೆಳಗೋಟೆ ಸಿ.ಕೆ.ಪುರ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ. ಸಂಜೆ 6 ರಿಂದ 8-30 ರತನಕ ಸ್ವಾಮಿಯ ಕಲ್ಯಾಣೋತ್ಸವ ನೆರವೇರಲಿದೆ.
ರಾತ್ರಿ 8-30 ರಿಂದ 9 ಗಂಟೆಯವರೆಗೆ ಚನ್ನಕೇಶವಸ್ವಾಮಿಯ ಅಷ್ಟಾವಧಾನ ಪೂರ್ವಕವಾಗಿ ಉಯ್ಯಾಲೋತ್ಸವ ನಂತರ ಪ್ರಸಾದ ವಿನಿಯೋಗವಿರುತ್ತದೆ.
ಬುಧವಾರ ಮಧ್ಯಾಹ್ನ 11-50 ರಿಂದ 12-20 ರವರೆಗೆ ಶ್ರೀದೇವಿ ಭೂದೇವಿ ಸಹಿತ ಚನ್ನಕೇಶವಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಚನ್ನಕೇಶವಸ್ವಾಮಿ ದೇವಸ್ಥಾನದ ಸಂಚಾಲಕರು ಹಾಗೂ ಹಿರಿಯ ನ್ಯಾಯವಾದಿ ಫಾತ್ಯರಾಜನ್ ವಿನಂತಿಸಿದ್ದಾರೆ.