ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ನಾಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಯಲಿದೆ.
ಈ ಮಧ್ಯೆ ಇಡಿಯಿಂದ ಲೋಕಾಯುಕ್ತ ಪೊಲೀಸ್ ಎಡಿಜಿಪಿಗೆ ಪತ್ರ ಬರೆದಿದ್ದು ಪಿಎಂಎಲ್‌ಐ ಕಾಯ್ದೆಯ ಸೆಕ್ಷನ್ 66 (2) ಅಡಿ ಮಾಹಿತಿ ಹಂಚಿಕೆಯಾಗಿದೆ. ಇಡಿಗೆ ಮಾಹಿತಿ ಹಂಚಿಕೊಳ್ಳುವ ಕಾನೂನಾತ್ಮಕ ಅಧಿಕಾರವಿದೆ.
ತನಿಖೆಯ ವೇಳೆ ಇತರ ಕಾಯ್ದೆಗಳ ಉಲ್ಲಂಘನೆಯಾಗಿದ್ದರೆ ಮಾಹಿತಿ ಹಂಚಿಕೊಳ್ಳುವ ಅಧಿಕಾರವಿದೆ. ಸಂಬಂಧಪಟ್ಟಂತಹ ತನಿಖಾ ಸಂಸ್ಥೆಗಳೊಂದಿಗೆ ಇಡಿ ಮಾಹಿತಿ ಹಂಚಿಕೊಳ್ಳಬಹುದು. ಸದ್ಯ ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಮುಡಾ ಪ್ರಕರಣದ ಮಾಹಿತಿ ಇಡಿ ಹಂಚಿಕೊಂಡಿದೆ. ನಾಳೆ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ಇಡಿಗೆ ಸಂಬಂಧಿಸಿದ ವಿಚಾರಣೆ ಇಲ್ಲ.
ಆದರೆ ಇಡಿಯ ಪತ್ರವನ್ನು ಸಿಎಂ ಪರ ವಕೀಲರು ಪ್ರಸ್ತಾಪಿಸಬಹುದು. ಇಡಿ ನಡೆ ರಾಜಕೀಯ ಪ್ರೇರಿತವೆಂದು ಹೈಕೋರ್ಟ್ ನಲ್ಲಿ ಪ್ರಸ್ತಾಪಿಸಬಹುದು.