ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೂ 10ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಬಿಗ್ ಬಾಸ್ ಮನೆಯಿಂದ ಗೌತಮಿ ಔಟ್ ಆಗಿದ್ದಾರೆ. ನಡುವಾರದ ಎಲಿಮಿನೇಟ್ ಪಟ್ಟಿಯಲ್ಲಿ ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಇದ್ದರು. ಈ 6 ಸ್ಪರ್ಧಿಗಳಲ್ಲಿ ಅಂತಿಮವಾಗಿ ಯಾರು ಹೊರ ನಡೆಯಲಿದ್ದಾರೆ ಎಂಬ ಕುತೂಹಲದಲ್ಲಿ ಎಲ್ಲರೂ ಮುಳುಗಿದ್ದರು. ಆದ್ರೆ ಅಂತಿಮವಾಗಿ ನಡುವಾರದ ಎಲಿಮಿನೇಟ್ ಆಗಿ ಗೌತಮಿ ಔಟ್ ಆಗಿದ್ದಾರೆ.
