ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜಿ.ಡಿ.ಸುರೇಶ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ.
ಭಾಷಾಂತರ ಅಧ್ಯಯನ ವಿಭಾಗದ ಡಾ.ಜಿ.ಉಮಾಮಹೇಶ್ವರ ಅವರ ಮಾರ್ಗದರ್ಶನದಲ್ಲಿ “ದಕ್ಷಿಣ ಭಾರತದ ದಲಿತ ಆತ್ಮಕಥನಗಳಲ್ಲಿ ಜಾತಿ ಶೋಷಣೆಯ ನಿರೂಪಣೆ” ಎಂಬ ವಿಷಯದ ಕುರಿತು ಸಲ್ಲಿಸಿದ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಿಂದ ಡಾಕ್ಟರ್ ಆಫ್ ಫಿಲಾಸಪಿ (ಪಿಎಚ್‍ಡಿ) ಪದವಿಗೆ ಅಂಗೀಕರಿಸಲಾಗಿದೆ.
ಜಿ.ಡಿ.ಸುರೇಶ್ ಅವರು ಗೊಡಬನಹಾಳ್ ಗ್ರಾಮದ ಪಶುವೈದ್ಯಕೀಯ ಇಲಾಖೆಯ ಜಿ.ವೈ.ದುರುಗೇಶಪ್ಪ ಮತ್ತು ಜಯಮ್ಮ ಅವರ ಪುತ್ರರಾಗಿದ್ದು, ಪ್ರಸ್ತುತ ಹೊಳಲ್ಕೆರೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶೈಕ್ಷಣಿಕ ಸಾಧನೆಗೆ ಪ್ರಾಂಶುಪಾಲ ಪ್ರೊ.ಸಿ.ಕೆ.ಕೊಟ್ರಪ್ಪ ಹಾಗೂ ಸಹೋದ್ಯೋಗಿಗಳು ಮತ್ತು ಬೋಧಕೇತರ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

































