ಕೇರಳ: ಪ್ರತಿ ವರ್ಷ ಸಾವಿರಾರು ಯುವಕರು UPSC ಪರೀಕ್ಷೆಗೆ ಹಾಜರಾಗುತ್ತಾರೆ. ಇದರಲ್ಲಿ ಅಂತಿಮ ಆಯ್ಕೆ ಪಡೆದ ಅನೇಕರ ಕಥೆಗಳು ಎಲ್ಲರಿಗೂ ಸ್ಪೂರ್ತಿದಾಯಕ. ಇವತ್ತ ನಾವು ಗೆಹಾನಾ ನವ್ಯಾ ಜೇಮ್ಸ್ ಕಥೆ ತಿಳಿದುಕೊಳ್ಳಬಹುದು.
IFS ಅಧಿಕಾರಿ ಗೆಹಾನಾ ನವ್ಯಾ ಜೇಮ್ಸ್ ಅವರು ಯಾವುದೇ ಕೋಚಿಂಗ್ ತರಗತಿಗೆ ಸೇರದೆ UPSC 2022 ರಲ್ಲಿ 6 ನೇ ರ್ಯಾಂಕ್ ಗಳಿಸಿದ್ದಾರೆ. ಕೇರಳದ ಪಾಲಾ ನಿವಾಸಿ ಗೆಹಾನಾ ನವ್ಯಾ ಜೇಮ್ಸ್ ಎರಡನೇ ಪ್ರಯತ್ನದಲ್ಲಿ UPSC ಆರನೇ ರ್ಯಾಂಕ್ ಗಳಿಸಿದ್ದರು.
ಗೆಹಾನಾ ಜೇಮ್ಸ್ ಯಾವುದೇ ಕೋಚಿಂಗ್ ಗೆ ಹೋಗಿಲ್ಲ, ಅಣಕು ಸಂದರ್ಶನಗಳನ್ನು ನೀಡಿಲ್ಲ. UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಲು ಯಾವುದೇ ಟೆಸ್ಟ್ ಸರಣಿಯನ್ನು ಎದುರಿಸಿಲ್ಲ. ನವ್ಯಾ ಯುಪಿಎಸ್ ಸಿಗೆ ಆಯ್ಕೆಯಾದಾಗ ಪಿಎಚ್ ಡಿ ಮಾಡುತ್ತಿದ್ದರು. ಫಲಿತಾಂಶ ಬಂದ ನಂತರ ಯುಪಿಎಸ್ ಸಿ ತೇರ್ಗಡೆಯಾಗುವುದು ಕನಸಾಗಿತ್ತು,
ಗೆಹಾನಾ ನವ್ಯಾ ಕೇರಳದ ಕೊಯಟ್ಟಂನ ಚವಾರ ಪಬ್ಲಿಕ್ ಸ್ಕೂಲ್ ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸೇಂಟ್ ಮೇರಿ ಶಾಲೆಯಿಂದ 12ನೇ ತರಗತಿ ತೇರ್ಗಡೆ. ಇದರ ನಂತರ, ಅವರು ಪಾಲಾದ ಅಲ್ಫೋನ್ಸಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿಎ ಮಾಡಿದರು ಮತ್ತು ವಿಶ್ವವಿದ್ಯಾಲಯದ ಟಾಪರ್ ಆಗಿದ್ದರು.
ಸೇಂಟ್ ಥಾಮಸ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಪಿಜಿ ಮಾಡಿದ್ದಾರೆ. ಇದರಲ್ಲೂ ಟಾಪರ್ ಆಗಿದ್ದರು. ಯುಜಿಸಿ ನೆಟ್ ಪರೀಕ್ಷೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಕೂಡ ಪಡೆದರು. UPSC ಫಲಿತಾಂಶದ ಸಮಯದಲ್ಲಿ, ಅವರು ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ತಮ್ಮ ಪಿಎಚ್ಡಿ ಮಾಡುತ್ತಿದ್ದರು.