ಗಾಜಾ ಒತ್ತೆಯಾಳುಗಳನ್ನ ಹೊರತನ್ನಿ, 5 ಮಿಲಿಯನ್ ಡಾಲರ್ ಬಹುಮಾನ ಪಡೆಯಿರಿ – ನೆತನ್ಯಾಹು

WhatsApp
Telegram
Facebook
Twitter
LinkedIn

ಟೆಲ್ ಅವೀವ್ : ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧೋನ್ಮಾದ ಕಡಿಮೆ ಆಗುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಂಪರ್ ಆಫರ್ ನೀಡಿದ್ದಾರೆ. ಗಾಜಾದಲ್ಲಿರೋ ಒತ್ತಾಳುಗಳನ್ನ ಸುರಕ್ಷಿತವಾಗಿ ಹೊರತಂದರೆ 5 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ. ನಮ್ಮವರನ್ನ ಇಟ್ಟುಕೊಂಡು ಹೇಡಿತನ ಮೆರೆಯುತ್ತಿರೋ ದುಷ್ಟರಿಗೆ ತಕ್ಕ ಶಾಸ್ತಿ ಮಾಡುತ್ತೇವೆ. ಎಲ್ಲೇ ಇದ್ದರೂ ಹುಡುಕಿಕೊಂಡು ಹೊಡೆದಾಕುತ್ತೇವೆ ಎಂದು ಬೆಂಜಮಿನ್ ನೆತನ್ಯಾಹು ವಾರ್ನಿಂಗ್ ನೀಡಿದ್ದಾರೆ. ಗಾಜಾ ಪ್ರದೇಶವನ್ನ ಹಮಾಸ್ ಆಳಬಾರದು ಎಂಬುದೇ ಇಸ್ರೇಲ್ ಪ್ರಮುಖ ಉದ್ದೇಶ. ಹಮಾಸ್‌ ಮತ್ತೆ ಗಾಜಾದಲ್ಲಿ ಅಧಿಕಾರಕ್ಕೆ ಬರಲ್ಲ ಎಂದಿರುವ ನೆತನ್ಯಾಹು ಒತ್ತೆಯಾಳುಗಳ ಬಿಡುಗಡೆಗೆ ಸಹಕರಿಸಿ ಎಂದು ಅಲ್ಲಿನ ಜನರಿಗೆ ಮನವಿ ಮಾಡಿದ್ದಾರೆ. ಪ್ರತಿ ಒತ್ತೆಯಾಳು ಬಿಡುಗಡೆಗೆ 5 ಮಿಲಿಯನ್‌ ಡಾಲರ್‌ ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ ಕೂಡ ಆಗುವ ಸಾಧ್ಯತೆ ಇದೆ. ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧ ಆದಷ್ಟು ಬೇಗ ನಿಲ್ಲುವ ನಿರೀಕ್ಷೆ ಇದೆ. ಗಾಜಾದಲ್ಲಿ ನಿಂತುಕೊಂಡೇ ಹಮಾಸ್‌ಗೆ ಎಚ್ಚರಿಕೆ ನೀಡಿರುವ ನೆತನ್ಯಾಹು, ನಮ್ಮ ಐಡಿಎಫ್‌ ಪಡೆಗಳು ಅದ್ಭುತವಾದದ್ದನ್ನು ಸಾಧಿಸಿವೆ. ಗಾಜಾದಲ್ಲಿ ಮತ್ತೆ ಹಮಾಸ್‌ ಆಳ್ವಿಕೆ ನಡೆಸುವುದಿಲ್ಲ. ನಾವು ಅದರ ಮಿಲಿಟರಿ ಸಾಮರ್ಥ್ಯಗಳನ್ನೆಲ್ಲಾ ಪರಿಣಾಮಕಾರಿಯಾಗಿ ನಾಶಪಡಿಸಿದ್ದೇವೆ. ಈಗ ನಾವು ಅದರ ಆಡಳಿತ ಸಾಮರ್ಥ್ಯಗಳನ್ನು ಮುರಿಯುತ್ತಿದ್ದೇವೆ. ಹಮಾಸ್‌ ಗಾಜಾದಲ್ಲಿ ಇರುವುದಿಲ್ಲ ಎಂದು ಗುಡುಗಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon