ರೆಡ್ಡಿ ಜನಸಂಘದಿಂದ ಎಲ್.ಕೆ.ಜಿಯಿಂದ ಪಿಯುವರೆಗೂ ಶಾಲೆ ಪ್ರಾರಂಭ: ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪನೆಯಾದ ರೆಡ್ಡಿ ಜನಸಂಘ ಮುಂದಿನ ದಿನಮಾನದಲ್ಲಿ ಎಲ್.ಕೆ.ಜಿಯಿಂದ ಪಿಯುವರೆಗೂ ವಸತಿಯುತ ಶಾಲೆಯನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿದೆ ಎಂದು ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷರು, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ರೆಡ್ಡಿ ಜನಸಂಘವನ್ನು ಸ್ಥಾಪನೆ ಮಾಡಿ ಬೆಳಸಲು ಹಲವಾರು ಜನ ಮಹಾನೀಯರು ಶ್ರಮವನ್ನು ಹಾಕಿದ್ದಾರೆ 1905ರ ಇಸವಿಯನ್ನು ನಮ್ಮ ಸಮುದಾಯದ ಮಕ್ಕಳು ಜಿಲ್ಲಾ ಕೇಂದ್ರಕ್ಕೆ ಬಂದು ಶಿಕ್ಷಣವನ್ನು ಪಡೆಯುವುದ ಅಸಾಧ್ಯವಾಗಿತ್ತು ಎಂದರು.

ಇಲ್ಲಿ ಸರಿಯಾದ ಜಾಗ ಇಲ್ಲದೆ ಶಿಕ್ಷಣವನ್ನು ಪಡೆಯಲು ಶ್ರಮವನ್ನು ಪಡಬೇಕಾಗಿತ್ತು ಈ ಸಮಯದಲ್ಲಿ ನಮ್ಮ ಹಿರಿಯರು ಸೇರಿ ಹಣವನ್ನು ಸಂಗ್ರಹ ಮಾಡಿ ಚಿತ್ರದುರ್ಗದಲ್ಲಿ ಜಾಗವನ್ನು ಖರೀದಿ ಮಾಡಿ ವಸತಿ ನಿಲಯವನ್ನು ಪ್ರಾರಂಭಿಸಿದರು, ತದ ನಂತರ ಇದನ್ನು ಮುಂದುವರೆಸಿಕೊಂಡು ಬಂದ ನಮ್ಮ ಹಿರಿಯರು ಹಾಗೂ ಬೇರೆಯವರು ಮಕ್ಕಳ ಶಿಕ್ಷಣಕ್ಕಾಗಿ ವಸತಿ ನಿಲಯವನ್ನು ನಡೆಸಿದರು ಎಂದರು.

ಅಂದು ನಮ್ಮ ಹಿರಿಯರು ಮಾಡಿದ ಆಸ್ತಿ ಇಂದು ನಮ್ಮನ್ನು ಕಾಪಾಡಿದೆ. ರೆಡ್ಡಿ ಜನ ಸಂಘ ಇಂದು ಆರ್ಥಿಕವಾಗಿ ಸಧೃಡವಾಗಿದೆ ಎಂದರೆ ಅದಕ್ಕೆ ನಮ್ಮ ಹಿರಿಯರು ಮಾಡಿದ ಅಸ್ತಿ ಕಾರಣವಾಗಿದೆ, ಇದರಿಂದ ನಮ್ಮ ಸಂಘದ ಆಶ್ರಯದಲ್ಲಿ ವಿವಿಧ ರೀತಿಯ ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಪುರಸ್ಕಾರ ಮಾಡುವುದರ ಮೂಲಕ ಅವರನ್ನು ಪ್ರೋತ್ಸಾಹ ಮಾಡಲಾಗುತ್ತಿದೆ.

ಎಂದ ಅವರು, ನಮ್ಮ ಸಮುದಾಯ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕೆಂದು ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ತಿರ್ಮಾನ ಮಾಡಿ ಇದಕ್ಕಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಸುಮಾರು 10 ಎಕರೆ ಜಾಗವನ್ನು ನೋಡಿದ್ದು, ಅದನ್ನು ಖರೀದಿ ಮಾಡುವುದರ ಮೂಲಕ ಮುಂದಿನ ದಿನದಲ್ಲಿ ಇಲ್ಲಿ ಸುಸಜ್ಜಿತವಾದ ಶಾಲೆಯನ್ನು ನಿರ್ಮಾಣ ಮಾಡಲಾಗುವುದು ಇದಕ್ಕೆ ಬೇಕಾದ ತಯಾರಿಯು ಸಹಾ ನಡೆಯುತ್ತಿದೆ ಇಲ್ಲಿ ಎಲ್.ಕೆ.ಜಿಯಿಂದ ಹಿಡಿದರು ಪಿಯುವರೆಗೂ ವಸತಿಯುತ ಶಿಕ್ಷಣವನ್ನು ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ನಮ್ಮ ರೆಡ್ಡಿ ಜನ ಸಂಘ ಬೆಳೆಯಲು ಕಾರಣರಾದವರು ಹಾಗೂ ನಮ್ಮಲ್ಲಿ ರೂಂಗಳನ್ನು ನಿರ್ಮಾಣ ಮಾಡಲು ಸಹಾಯ ಮಾಡಿದವರ ಭಾವಚಿತ್ರವನ್ನು ಹಾಕಲು ತೀರ್ಮಾನ ಮಾಡಲಾಗಿದೆ. ದಾವಣಗೆರೆಯಲ್ಲಿನ ನಮ್ಮ ಆಸ್ತಿಯಲ್ಲಿ ಹಳೆಯದಾದ ಕಟ್ಟಡ ಇತ್ತು ಅದನ್ನು ಕೆಡವಿ ಹೊಸದಾದ ಕಟ್ಟಡವನ್ನು ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ನಮ್ಮ ಸಂಘದ ಆಸ್ತಿಗಳಿಂದ ತಿಂಗಳು ವರಮಾನ ಬರಲಿದೆ. ಇದರಿಂದ ಸಮುದಾಯದ ಪ್ರವತಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ನಮ್ಮ ಸಮುದಾಯ ಮಕ್ಕಳು ಸಹಾ ಐಪಿಎಸ್. ಐಎಎಸ್, ಕೆಎಎಸ್ ಮಾಡಲು ಬೇಕಾದ ತರಬೇತಿಯನ್ನು ನೀಡಲು ಸಹಾ ನಮ್ಮ ಸಂಘ ತಯಾರಿದೆ ಇದಕ್ಕೆ ಅಗತ್ಯವಾಗಿ ಬೇಕಾದ ಸಂಪನ್ಮೂಲವನ್ನು ನೀಡಲು ಸಂಘ ತಯಾರಿದೆ ಎಂದರು.

ಸಂಘದ ಕಾರ್ಯದರ್ಶಿ ಶ್ರೀಮತಿ ಶೀಲ ಮಾತನಾಡಿ, ಸಂಘದ ಅಭೀವೃದ್ದಿಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಜಗಳೂರು ಹಾಸ್ಟಲ್ ಕಟ್ಟಡದ ನವೀಕರಣ ಹೂಸದಾಗಿ 4 ರೂಂಗಳನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದುರ್ಗದಲ್ಲಿ ಈ ಸಮುದಾಯ ಭವನದಲ್ಲಿ ವರ್ಷದಲ್ಲಿ 87 ಮದುವೆಗಳು ನಡೆದಿವೆ. ನಮ್ಮ ಹಿರಿಯರು ಸ್ಥಾಪನೆ ಮಾಡಿದ ಸಂಘ ಉತ್ತಮವಾಗಿ ಸದೃಢವಾಗಿದೆ ಇದೆ. ಬೇರೆ ಸಮಾಜಕ್ಕೆ ಹೋಲಿಸಿದರೆ ನಮ್ಮ ಸಮಾಜ ಉತ್ತಮವಾಗಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪರಶುರಾಮ್, ಖಂಜಾಚಿ ಸುರೇಶ್ ಕುಮಾರ್, ಸದಸ್ಯರುಗಳಾದ ರಾಮಕೃಷ್ಣ, ಮಂಜುನಾಥ್, ಸುದರ್ಶನ ರೆಡ್ಡಿ, ವೇಣುಗೋಪಾಲ್, ರಾಘವರೆಡ್ಡಿ, ತಿಪ್ಪಾರೆಡ್ಡಿ, ನಾಗರಾಜ್, ಚಂದ್ರರೆಡ್ಡಿ,ಮಾರುತೇಶ್ ರೆಡ್ಡಿ, ಹರೀಶ್, ಶ್ರೀಮತಿ ರೂಪ, ಶ್ರೀಮತಿ ಸುಜಾತ, ಶ್ರೀಮತಿ ಸುಮನ್, ಶ್ರೀಮತಿ ರೇಖಾ ಹಾಗೂ ಶ್ರೀಮತಿ ಇಂದಿರಮ್ಮ ಭಾಗವಹಿಸಿದ್ದರು.

ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಉಪಾಧ್ಯಕ್ಷರಾದ ಎಂ.ಕೆ.ಆನಂತರೆಡ್ಡಿ ಸ್ವಾಗತಿಸಿದರು. ಜಯಶೀಲರೆಡ್ಡಿ ಕಳೆದ ಒಂದು ವರ್ಷದಲ್ಲಿ ನಿಧನರಾದವರ ಹೆಸರನ್ನು ಓದಿ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು. ತಿಮ್ಮಾರೆಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಜನಾ ನೃತ್ಯ ಕಲಾ ಕೇಂದ್ರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon