ಚಿತ್ರದುರ್ಗ: ಕೇಂದ್ರ ಸರ್ಕಾರ ಜಾರಿ ಮಾಡಿರುವ ವಿಬಿ-ಜಿ-ರಾಮ್-ಜಿ ಯೋಜನೆಯ ಬಗ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ ಸಲ್ಲದ ಅಪ ಪ್ರಚಾರವನ್ನು ಮಾಡುತ್ತಿದೆ ಇದರ ಬಗ್ಗೆ ನಮ್ಮ ಪಕ್ಷದವರು ಗ್ರಾಮಾಂತರ ಪ್ರದೇಶದ ಜನತೆ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿಸುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಪ ಪ್ರಚಾರಕ್ಕೆ ತಿರುಗೇಟು ನೀಡುವಂತೆ ಪಕ್ಷದ ಮುಖಂಡರುಗಳಿಗೆ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ಕರೆ ನೀಡಿದರು.
ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿನ ಜಗಳೂರು ಮಾಹಾಲಿಂಗಪ್ಪ ಕಂಫರ್ಟ್ನಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿವತಿಯಿಂದ ಹಮ್ಮಿಕೊಂಡಿದ್ದ ನಡೆದ ವಿಬಿಜಿ ರಾಮ್ ಜಿ ಜಾಗೃತ ಅಭಿಯಾನದ ಜಿಲ್ಲಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗ್ರಾಮಾಂತರ ಪ್ರದೇಶದ ಜನತೆಗೆ ಉಪಯೋಗವಾಗಲಿ ಎಂದು ಮನೆರೇಗಾ ಯೋಜನಯಲ್ಲಿ ತಿದ್ದುಪಡಿಯನ್ನು ತಂದು ಹೊಸ ರೂಪವನ್ನು ನೀಡಿವುದರ ಮೂಲಕ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಜಾರಿ ಮಾಡಿದೆ ಈ ಹಿಂದೆ ಇದರಲ್ಲಿ ಭ್ರಷ್ಠಾಚಾರ ಹೆಚ್ಚಾಗಿತಗ್ತು ಇದನ್ನು ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ ಇದಕ್ಕೆ ಕಾಂಗ್ರೇಸ್ ಪಕ್ಷದವರಿಗೆ ಮುಖಂಡರಿಗೆ ಹಣವನ್ನು ಹೊಡೆಯಲು ಆಗುತ್ತಿಲ್ಲ ಎಂದು ಹೊಟ್ಟೆ ಹುರಿಯಿಂದ ಸುಮ್ಮನೆ ಇದರಲ್ಲಿದ್ದ ಗಾಂಧಿಜಿಯವರವ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ರಂಪ ರಾಮಾಯಣ ಮಾಡುತ್ತಾ ಬೀದಿಗಿಳಿ ದಿದ್ದಾರೆ ಎಂದರು.
ಹಿಂದಿನ ಈ ಯೋಜನೆಯಲ್ಲಿ ಪುಡಿ ರಾಜಕಾರಣಿಗಳು ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿಗಳನ್ನು ಹಾಕಿ ಕೊಂಡು ಮಾಡುತ್ತಾ ಕೆಲವೆಡೆಗಳಲ್ಲಿ ಮಾಡದೇ ಹಣವನ್ನು ಪಡೆಯುತ್ತಿದ್ದರಿ ಈಗ ಕೇಂದ್ರ ಸರ್ಕಾರ ಇದಕ್ಕೆ ಬಿಗಿಯನ್ನು ಮಾಡಿದೆ ಯಾವುದೇ ಕಾಮಗಾರಿ ಪಡೆಯಬೇಕಾದರೆ ಅನುಮತಿಯನ್ನು ಪಡೆದು ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ತಾಕಿತು ಮಾಡಿದ್ದು ಕಾಂಗ್ರೆಸ್ ರವರಿಗೆ ನುಂಗಲಾರದ ತುತ್ತಾಗಿದೆ, ಇದರಿಂದ ನಮ್ಮ ಸಂಪಾದನೆ ಹೋಯಿತ್ತಲ ಎಂದು ಕೂರುಗುತ್ತಾ ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಕರೆಯಿಸಿಕೊಂಡು ಅವರಿಗೆ ತೆಲೆ ತಿಂದು ಇದರ ವಿರುದ್ದ ಹೋರಾಟವನ್ನು ಮಾಡುವಂತೆ ಮಾಡಿ ಆಧಿಕಾರಿಗಳನ್ನು ಬಳಕೆ ಮಾಡಿಕೊಂಡು ಈ ಕಾಯ್ದೆ ಜಾರಿಯಾಗದಂತೆ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮ ಪಕ್ಷದವರು ಇದರ ಮಹತ್ವವನ್ನು ತಿಳಿದುಕೊಂಡು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಅಲ್ಲಿನ ಜನತೆಗೆ ಇದರ ಮಹತ್ವ ಕೇಂದ್ರ ಸರ್ಕಾರ ಯಾಕೆ ಇದರ ತಿದ್ದುಪಡಿಯನ್ನು ಮಾಡಿತು ಇದರಿಂದ ನಿಮಗೇ ಏನು ಲಾಭ ಎಂದು ತಿಳಿಸುವುದರ ಮೂಲಕ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಲು ಮುಂದಾಗುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಮಾತನಾಡಿ, ಕಾಂಗ್ರೆಸ್ ಪಕ್ಷದವರಿಗೆ ಸುಳ್ಳು ಮನದೇವರು ಅವರು ಸುಳ್ಳನ್ನು ನೂರು ಬಾರಿ ಹೇಳುವುದರ ಮೂಲಕ ಅದನ್ನು ಸತ್ಯವನ್ನಾಗಿ ಮಾಡುತ್ತಿದ್ದಾರೆ. ನೆಹರು ಕಾಲದಿಂದಲೂ ಸಹಾ ಅವರು ಸುಳ್ಳನ್ನು ಹೇಳುತ್ತಾ ಬಂದು ಜನರನ್ನು ನಂಬಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಕಾಯ್ದೆಯ ಬಗ್ಗೆ ರಾಜ್ಯ ಸರ್ಕಾರ ಅಪಪ್ರಚಾರವನ್ನು ಮಾಡುತ್ತಾ ಬಂದು ಜನರನ್ನು ನಂಬಿಸುತ್ತಿದೆ, ನಕಲಿ ಗಾಂಧಿಯವರ ಹೆಸರಿನಲ್ಲಿ 400ಕ್ಕೂ ಹೆಚ್ಚು ಯೋಜನೆಗಳು ಇವೆ ಇದರ ಬಗ್ಗೆ ಯಾರು ಸಹಾ ಆಲೋಚನೆ ಮಾಡುತ್ತಿಲ್ಲ, ಗಾಂಧಿಜಿಯವರ ಹೆಸರನ್ನು ತೆಗೆದು ಅಪಮಾನ ಮಾಡಿದೆ ಎಂದು ಎಲ್ಲಾ ಕಡೆಗಳಲ್ಲಿ ಬೊಬ್ಬೆ ಹೊಡಿಯುತ್ತಿದ್ದಾರೆ. ಮಹಾತ್ಮ ಗಾಂಧಿಜಿಯವರ ಸಮಾಧಿಯ ಮೇಲೆ ಹೇ ರಾಮ ಎಂದು ಬರೆದಿದೆ ಅಲ್ಲದೆ ಗಾಂಧಿಜಿಯವರ ಸಾಯುವ ಕ್ಷಣದಲ್ಲಿ ರಾಮ ಎಂದು ಹೇಳುತ್ತಾ ಪ್ರಾಣವನ್ನು ಬಿಟ್ಟಿದ್ದಾರೆ ಗಾಂಧಿಜಿಯವರಿಗೆ ರಾಮನ ಮೇಲೆ ಇರುವ ನಂಬಿಕೆ ಈಗಿನ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಇಲ್ಲವಾಗಿದೆ ರಾಮ ಎಂದರೆ ಸಾಕು ಸಿಟ್ಟಿಗೆ ಏಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಕಾಯ್ದೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಶಿವರಾತ್ರಿ ಆದ ನಂತರ ಯುಗಾದಿ ಬರುವುದರೊಳಗೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಪಾದಯಾತ್ರೆಯನ್ನು ಮಾಡುವುದರ ಮೂಲಕ ಜನತೆಗೆ ಸತ್ಯ ಏನು ಎನ್ನುವುದರ ಬಗ್ಗೆ ಅರಿವು ಮೂಡಿಸಬೇಕಿದೆ, ಈ ಹೊಸದಾದ ಕಾಯ್ದೆಯಿಂದ ಕೂಲಿ ಕಾರ್ಮಿಕರಿಗೆ ಉಪಯೋಗವಾಗಿದೆ, ಒಂದು ವಾರದಲ್ಲಿ ಕೂಲಿ ಹಣ ಬರುತ್ತದೆ 15 ದಿನವಾದರೂ ಸಹಾ ಹಣ ಬರದಿದ್ದರೆ ಅದಕ್ಕೆ ಬಡ್ಡಿಯನ್ನು ಸೇರಿಸಿ ಕೂಡವಂತೆ ಕಾಯ್ದೆಯಲ್ಲಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದಿನ ಈ ಯೋಜನೆಯಲ್ಲಿ ಬಹು ಭ್ರಷ್ಠಾಚಾರದಲ್ಲಿ ಚಿತ್ರದುರ್ಗ ಮೂರನೇ ಸ್ಥಾನದಲ್ಲಿತ್ತು, ಇದನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು ನಮ್ಮ ಸರ್ಕಾರ ಬಂದ ಮೇಲೆ ಇದನ್ನು ಸರಿಪಡಿಸಿ ಚಿತ್ರದುರ್ಗವನ್ನು ಕಪ್ಪು ಪಟ್ಟಿಯಿಂದ ತೆಗೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು, ನಿಕಟಪೂರ್ವ ಅಧ್ಯಕ್ಷರಾದ ಎ ಮುರುಳಿ, ಹಿರಿಯೂರು ಪರಾಜಿತ ಅಭ್ಯರ್ಥಿ ಎನ್.ಆರ್ ಲಕ್ಷ್ಮಿಕಾಂತ್, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಅನಿಲ್, ಮಂಜುನಾಥ್ ಭಾಗವಹಿಸಿದ್ದರು. ಮೂರಾರ್ಜಿ ಪ್ರಾರ್ಥಿಸಿದರೆ, ಪ್ರಧಾನ ಕಾರ್ಯದಶೀ ಮಾಧುರಿ ಗೀರೀಶ್ ಸ್ವಾಗತಿಸಿದರೆ ಮೋಹನ್ ಕುಮಾರ್ ಕಾರ್ಯಕ್ರನ ನಿರೂಪಿಸಿದರು.
































