ಹಸಿದವರಿಗೆ ಅನ್ನ, ನೀರು ನೀಡುವುದೇ ನಿಜವಾದ ಧರ್ಮ: ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಹಸಿದವರಿಗೆ ಅನ್ನ, ನೀರಡಿಕೆಯಾದವರಿಗೆ ನೀರು, ಬಿಸಿಲಿನಲ್ಲಿ ಬಳಲಿದವರಿಗೆ ನೆರಳನ್ನು ನೀಡುವುದು ನಿಜವಾದ ಧರ್ಮವಾಗಿದೆ ಇದು ನಮ್ಮನ್ನು ಮುಂದಿನ ದಿನದಲ್ಲಿ ಕಾಯುತ್ತದೆ ಎಂದು ಲಕ್ಷ್ಮೇಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ನಗರದ ರಂಗಯ್ಯನ ಬಾಗಿಲ ಬಳಿಯಿರುವ ಶ್ರೀ ಉಜ್ಜಯಿನಿ ಮಠದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ  ಶ್ರೀಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ್ವರರಾದ ಲಿಂ|| ಮರುಳಾರಾಧ್ಯ ಶಿವಾಚಾರ್ಯ ಮಹಾ ಭಗವತ್ಪಾದಕರ 30ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಜನ ಜಾಗೃತಿ ಹಾಗೂ ಧರ್ಮ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆರ್ಶೀವಚನ ನೀಡಿದ ಶ್ರೀಗಳು, ಇಂದಿನ ದಿನಮಾನದಲ್ಲಿ ಅನ್ನ, ನೀರು ನೆರಳನ್ನು ನೀಡುವುದು ರಸ್ತೆಯನ್ನು ಮಾಡುವುದು ಪುಣ್ಯದ ಕೆಲಸವಾಗಿದೆ. ಮರುಳಾಧ್ಯ ಶ್ರೀಗಳು ತಮ್ಮ ಜೀವನವನ್ನೇ ಈ ಮಠಕ್ಕೆ ಸವೆಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಪಟ್ಟಾಧಿಕಾರಿಗಳಾಗಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಇಲ್ಲಿ ಕರಿ ಹಂಚಿನ ಮನೆಯಾಗಿತ್ತು ಇದನ್ನು ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪವನ್ನಾಗಿ ಮಾಡಿದರು. ಇದ್ದಲ್ಲದೆ ವಿವಿಧ ಮಠಗಳಿಗೆ ಮರಿಯನ್ನು ನೀಡಿದರು, ಬಡ ಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ನೀಡುವಲ್ಲಿ ಶ್ರೀಗಳ ಪಾತ್ರ ಮಹತ್ವದಾಗಿದೆ ಎಂದರು.

ಸಮಾರಂಭದ ನೇತೃತ್ವವನ್ನು ವಹಿಸಿದ್ದ ಬೀದರ್ ಜಿಲ್ಲೆಯ ಎಣುಕಲ್ಲುಗಡ್ಡೆಯ ಶ್ರೀ ವೀರಭದ್ರ ಶ್ರೀಗಳು ಮಾತನಾಡಿ, ಚಿತ್ರದುರ್ಗ ಗಂಡು ಮೆಟ್ಟಿನ ನಾಡಾಗಿದೆ ಹೂರ ರಾಷ್ಟ್ರದಲ್ಲಿಯೂ ಸಹಾ ಇದಕ್ಕೆ ಹೆಸರಿದೆ. ಓನಕೆ ಓಬವ್ವ, ಮದಕರಿ ನಾಯಕ, ಸೇರಿದಂತೆ ವಿವಿಧ ಮಠಗಳಿವೆ ಇಲ್ಲಿನ ಉಜ್ಜಯಿನಿ ಮಠಕ್ಕೆ ಲಿಂಗೈಕ್ಯ ಶ್ರೀಗಳು ಇದರ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಸವೆಸಿದರು. ತುಂಬ ಹಳೆಯದಾಗಿದ್ದ ಈ ಮಠವನ್ನು ಉನ್ನತ ಮಟ್ಟಕ್ಕ ತೆಗೆದುಕೊಂಡು ಹೋದರು, ಶಾಲೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಮಕ್ಕಳಿಗೆ ಅಕ್ಷರ ದಾಸೋಹವನ್ನು ನೀಡಿದರು, ಹಾಸ್ಟಲ್ಗಳನ್ನು ನಿರ್ಮಾಣ ಮಾಡುವುದರ ಮೂಲಕ ಅನ್ನ ದಾಸೋಹ ನೀಡಿದರು.

ಚಿತ್ರದುರ್ಗದಲ್ಲಿ ಅಂದಿನ  ದಿನಮಾನದಲ್ಲಿಯೇ ಪಂಚಚಾರ್ಯ ಶ್ರೀಗಳು ಅಡ್ಡಪಲ್ಲಕ್ಕಿ ಮಹೋತ್ಸವವನ್ನು ಯಾವುದೇ ಅಡೇ ತಡೆ ಇಲ್ಲದೆ ಕಾರ್ಯವನ್ನು ಮಾಡಲಾಯಿತು. ಇದರ ಅಂಗವಾಗಿ ನಗರದಲ್ಲಿ ಪಂಚಚಾರ್ಯ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಲಾಯಿತು. ಇಂದಿನ ದಿನಮಾನದಲ್ಲಿ ನಮ್ಮ ಮಠಕ್ಕೆ ಮರಿಯನ್ನಾಗಿ ಮಾಡಲು ನಾವು ಮುಂದೆ ಬಂದಿದ್ದರೂ ಸಹಾ ಯಾರು ಸಹಾ ತಮ್ಮ ಮಕ್ಕಳನ್ನು ನೀಡುತ್ತಿಲ್ಲ, ಚಿತ್ರದುರ್ಗದ ಈ ಉಜ್ಜಯಿನಿ ಪೀಠ ವಿದ್ವತ್ತಿನ ಪೀಠವಾಗಿದೆ ಇಲ್ಲಿ ಅಭ್ಯಾಸವನ್ನು ಮಾಡಿದವರು ಈ ಉನ್ನತವಾದ ಸ್ಥಾನದಲ್ಲಿದ್ದಾರೆ, ಇದು ಭಕ್ತರ ಬೀಡಾಗಿದೆ, ಇಂದಿನ ದಿನಮಾನದಲ್ಲಿ ಮಠದಿಂದ ಘಟ ಬೇಳೆಯಬಾರದು ಘಟದಿಂದ ಮಠ ಬೆಳೆಯಬೇಕಿದೆ, ಆದರೆ ಇಂದಿನ  ದಿನಮಾನದಲ್ಲಿ ಮಠದ ಆಸ್ತಿಯನ್ನು ನೋಡಿ ಮಠಕ್ಕೆ ಸ್ವಾಮಿಗಳಾಗುವವರಿದ್ದಾರೆ ಎಂದರು.

ಈ ಸಮಾರಂಭದಲ್ಲಿ ಉಜ್ಜಯನಿ ಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಅಭೀಷೇಕದೇವರು, ಜಂಗಮ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜನಯ್ಯ, ನ್ಯಾಯವಾದಿಗಳಾದ ಕೆ.ಎನ್,ವಿಶ್ವನಾಥಯ್ಯ, ಉಜ್ಜಯಿನಿ ಮಠದ ಕಾರ್ಯದರ್ಶಿಗಳಾದ ಯು.ಎಂ.ಆರ್.ಈಶ್ವರ ಪ್ರಸಾದ್ ಭಾಗವಹಿಸಿದ್ದರು.

ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ವಟುಗಳಿಗೆ ಲಿಂಗದೀಕ್ಷಾ (ಅಯ್ಯಚಾರ) ಕಾರ್ಯಕ್ರಮ ನಡೆದಿದ್ದು, ನಂತರ ಲಿಂ|| ಜಗದ್ಗುರುಗಳ ಕರ್ತೃ ಗದ್ದುಗೆಗೆ ಹಾಗೂ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಮಹಾ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ನಡೆಸಿ ನಂತರ 108 ಜನ ಮುತೈದೆಯರಿಗೆ ಉಡಿ ತುಂಬುವ ಕಾರ್ಯವನ್ನು  ಡಾ.ವಿರೇಶ್ ಹೀರೇಮಠರವರು ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಗಂಜಿಗಟ್ಟೆ ಕೃಷ್ಣಮೂರ್ತಿಯವರಿಂದ ಜನಪದ ಗೀತೆಗಳ ಗಾಯನ ಹಾಗೂ ಹಾಸ್ಯ ಸಾಹಿತಿ ಜಗನ್ನಾಥ್ ರವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಶ್ರೀಮತಿ ಆಶಾ ಸುದರ್ಶನ ಪ್ರಾರ್ಥಿಸಿದರೆ, ಶಿಲ್ಪ ಸ್ವಾಗತಿಸಿದರು, ಜಲಜಾಕ್ಷಿ ಪ್ರಸ್ತಾವಿಕವಾಗಿ ಮಾತನಾಡಿದರು,

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon