ಬಿಸಿಸುದ್ದಿ.ಕಾಂ ಗೆ ಬಲ ತುಂಬಿದ GNI Program: ಬಿಸಿಸುದ್ದಿ ವೇಗ ಈಗ ಮತ್ತಷ್ಟು ವಿನೂತನ !

ಚಿತ್ರದುರ್ಗ: ಬಿಸಿಸುದ್ದಿ (bcsuddi.com Kannada News Portal)  ಹತ್ತು ವರ್ಷದ ಸಂಭ್ರಮದಲ್ಲಿದೆ. ಇದನ್ನು ದುಪ್ಪಟ್ಟುಗೊಳಿಸುವ ನಮ್ಮ ಪ್ರಯತ್ನಕ್ಕೆ GNI program ನಮ್ಮ ಕೈ ಹಿಡಿದಿದೆ ಎಂಬ ಸುದ್ದಿ ಓದುಗರಾದ ನಿಮ್ಮ ಗಮನಕ್ಕೆ ತರಲು ನಮ್ಮ ಬಳಗಕ್ಕೆ  ರೋಮಾಂಚನ ಆಗುತ್ತದೆ.

ಒಂಭತ್ತು ವರ್ಷದ ಹಿಂದೆ bcsuddi.com Kannada News Portal ಅನ್ನು ಆರಂಭಿಸುವ ಸಂದರ್ಭ ಬಹಳಷ್ಟು ಆತಂಕ ಮನೆ ಮಾಡಿತ್ತು. ಅದರಲ್ಲೂ ಮಧ್ಯಕರ್ನಾಟಕದಲ್ಲಿಯೇ ಪ್ರಥಮ News Portal ಬಿಸಿಸುದ್ದಿ.ಕಾಂ ಆಗಲಿದೆ ಎಂಬ ಸ್ನೇಹಿತರ ಮಾತು ಮತ್ತಷ್ಟು ದುಗಡತನಕ್ಕೆ ತಳ್ಳಿತ್ತು.

ಹಲವು ಆತಂಕಗಳ ಮಧ್ಯೆ ಆರಂಭಿಸಿದ ಬಿಸಿ ಸುದ್ದಿಗೆ ಈಗ ಹತ್ತು ವರ್ಷದ ಪ್ರಾಯ. ಅದರಲ್ಲೂ ಆರ್ಥಿಕ ಸಮಸ್ಯೆಗಳ ಮಧ್ಯೆ ಓದುಗರ ಮನ ತೃಪ್ತಿಗೊಳಿಸುವ ನಮ್ಮ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದವರು ನೀವುಗಳೇ.

Advertisement

ನಿಮ್ಮಗಳ ಪ್ರೋತ್ಸಾಹ, ಸಂಕಷ್ಟ ಕಾಲದಲ್ಲಿ ಕೈಹಿಡಿದು ನಡೆಸುವ ಓದುಗರಾದ ನಿಮ್ಮ ಗುಣ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು BCSUDDI.COM Kannada News Portal ಅನ್ನು ಮುನ್ನಡೆಸಲು ಸಾಧ್ಯವಾಗಿದೆ.

ಅದರಲ್ಲೂ ಮೊಳೆ ಜೋಡಿಸುವ ಪತ್ರಿಕೋದ್ಯಮದ ಮೂಲಕ ಪತ್ರಿಕಾ ಜೀವನ ಆರಂಭಿಸಿದ ನಾನು ಈ ಕ್ಷೇತ್ರದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಿದ್ದೇ ಹೆಚ್ಚು. ಆದರೂ ನಷ್ಟ, ಸೋಲುಗಳನ್ನು ಮಣಿಸಿ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕುವಂತೆ ಮಾಡಿದ್ದು ನನ್ನಲ್ಲಿದ್ದ ಮಾಧ್ಯಮದ ಹುಚ್ಚು.

ಮುದ್ರಣ, ದೃಶ್ಯ ಮಾಧ್ಯಮ, ಯೂಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ಹೆಜ್ಜೆ ಹಾಕಿದ ನಮಗೆ News Portal ಕ್ಷೇತ್ರದಲ್ಲಿ ಹೆಚ್ಚು ಸ್ವತಂತ್ರ, ಮನತೃಪ್ತಿ, ಓದುಗರ ಬೆಂಬಲ ದೊರೆಯಿತು ಎನ್ನಬಹುದು.

ಅಚ್ಚರಿ ಎಂಬಂತೆ ಓದುಗರ ಬೆಂಬಲದ ಫಲ GNI program ಮೂಲಕ ನೀಡಿದ ಫಂಡಿಂಗ್ ಜೊತೆಗೆ ಬೆಂಬಲ, ಸಹಕಾರ ಮತ್ತೊಂದು ಹೊಸ ಚಿಂತನೆ, ಸಾಹಸಕ್ಕೆ ಕೈ ಹಾಕಲು ಸಾಧ್ಯವಾಯಿತು.

GNI program ಮೂಲಕ Readwhere ಸಂಸ್ಥೆ ನೀಡಿದ ತಾಂತ್ರಿಕ ಸಹಕಾರದಿಂದ ನಮ್ಮ bcsuddi.com ನ ಬಲ ಮತ್ತಷ್ಟು ಹೆಚ್ಚಿದೆ. GNI program ಮೂಲಕ Readwhere ಸಂಸ್ಥೆಯಿಂದ ನಮಗೆ Bcsuddi Android And IOS App ಮತ್ತು PWA App ದೊರೆತಿದ್ದು,  BCSUDDI.com ನ traffic ತೀವ್ರಗತಿಯಲ್ಲಿ ಏರಿಕೆ ಕಂಡು, ನಿರೀಕ್ಷೆಯೇ ಮಾಡಲು ಸಾಧ್ಯವಾಗದ ರೀತಿ ಓದುಗರ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿಯೇ ಚಿತ್ರದುರ್ಗದ website ಮೊದಲ ಸಾಲಲ್ಲಿ ನಿಂತಿರುವುದು ಓದುಗರ ಪ್ರೋತ್ಸಾಹ ಹಾಗೂ GNI program ನ ಸಹಕಾರ, ಫಂಡಿಂಗ್ ಎನ್ನುವುದರಲ್ಲಿ ನಿಸಂಶಯ.

ಸಾಮಾಜಿಕ ಜಾಲತಾಣವನ್ನು ಬಲಗೊಳಿಸುವ ಜೊತೆಗೆ ಸರಿ ದಾರಿಯತ್ತ ಕೊಂಡೊಯ್ಯಬೇಕೆಂಬ GNI program ನ ಇಚ್ಛಾಶಕ್ತಿ ನಿಜಕ್ಕೂ ಮಾದರಿ ಕಾರ್ಯವಾಗಿದೆ.

ಅದರಲ್ಲೂ ಕನ್ನಡ ಸೇರಿದಂತೆ ಭಾರತ ದೇಶದ ಎಲ್ಲ  ಪ್ರಾದೇಶಿಕ ಭಾಷೆಗಳ News Portal ಗಳಿ ಗೆಆರ್ಥಿಕ ಸಹಾಯ ಮಾಡಿರುವುದು ಜನಮೆಚ್ಚುಗೆ ಕಾರ್ಯವಾಗಿದೆ.

GNI program ನಡಿ Readwhere ಸಂಸ್ಥೆ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಏನೇನಿತ್ತು?

  • ಹಂತ 1 -ಜಿಎನ್‌ಐ ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನಲ್ಲಿ ಆಯ್ಕೆ
  • ಆರಂಭಿಕ ಮೌಲ್ಯಮಾಪನ ಮತ್ತು ಸಮಾಲೋಚನೆ(1:1 ಸಮಾಲೋಚನೆ)
  • ಟೆಕ್-ಟಾಕ್ ಸೆಷನ್‌ಗಳಲ್ಲಿ ಭಾಗವಹಿಸುವಿಕೆ(GA4, Google AdSense, YouTube Shorts, )
  • ಹಂತ 2 – ವಿತರಣೆಗಳು (PWA ಮತ್ತು ಅಪ್ಲಿಕೇಶನ್ ಅಭಿವೃದ್ಧಿ)

ಈ ಹಂತದಲ್ಲಿ bcsuddi.com ಪುಟ ತೆರೆದುಕೊಳ್ಳುವಿಕೆ ವೇಗ ಮತ್ತಷ್ಟು ಹೆಚ್ಚಿದ್ದು, ಉತ್ತಮ ಫಲಿತಾಂಶ ಸುಧಾರಣೆಗಳನ್ನು ಕಂಡಿದೆ.

ಬಿಸಿಸುದ್ದಿ.ಕಾಂ ನ ಪ್ರಗತಿ

ಬಿಸಿಸುದ್ದಿ GNI program ಮೂಲಕ‌ ದೊರೆತ ಫಂಡಿಂಗ್ ಸದ್ಬಳಕೆ ಮಾಡಿಕೊಂಡು ಮತ್ತಷ್ಟು ಎತ್ತರಕ್ಕೆ ಏರಲು ನಾವುಗಳು ಹೆಜ್ಜೆ ಹಾಕಿದ್ದೇವೆ.

ಮೊದಲ ಹಂತದಲ್ಲಿ ಚಿತ್ರದುರ್ಗ ಹೃದಯ ಭಾಗದಲ್ಲಿ (ವಿಳಾಸ: ಬಿಸಿ ಸುದ್ದಿ ಕಚೇರಿ, ಯೂನಿಟ್ ಹೆಲ್ತ್ ಆಸ್ಪತ್ರೆ ಪಕ್ಕ, ಆಕಾಶವಾಣಿ ಕೇಂದ್ರದ ಎದುರು, ಚಿತ್ರದುರ್ಗ-577501,  ಮೊಬೈಲ್ ನಂಬರ್ 9916881352) ಬಿಸಿಸುದ್ದಿ website ಕಚೇರಿ ಆರಂಭಿಸಿದ್ದೇವೆ.

ಜೊತೆಗೆ ಸುದ್ದಿ ಸಂಗ್ರಹವನ್ನು ವಿಸ್ತರಿಸಿಕೊಳ್ಳುವ ಜೊತೆಗೆ ಗಣ್ಯರ ಸಂದರ್ಶನಕ್ಕೆ ಬೇಕಾದ ಪರಿಕರಗಳಿಗೆ ಫಂಡಿಂಗ್ ಅನ್ನು ಬಳಸಿಕೊಂಡಿದ್ದೇವೆ.

ಮಾರ್ಚ್ 9, ಶನಿವಾರ ಸಂಜೆ 5 ಗಂಟೆಗೆ ಹಮ್ಮಿಕೊಂಡಿದ್ದ ಬಿಸಿಸುದ್ದಿ ಕಚೇರಿ ಉದ್ಘಾಟನೆ ಜೊತೆಗೆ ದೃಶ್ಯ, ಮುದ್ರಣ, ಸಾಮಾಜಿಕ ಜಾಲತಾಣಗಳ ಸಮಾಜಮುಖಿ ಚಿಂತನೆ ಹಾಗೂ ಅಪಾಯದ ಕುರಿತು ವಿಚಾರಸಂಕಿರಣ ಓದುಗರಾದ ನಿಮ್ಮಗಳ ಪಾಲ್ಗೊಳ್ಳುವಿಕೆ ಫಲ ನಿರೀಕ್ಷೆಗೂ ಮೀರಿ ಯಶಸ್ವಿಗೊಂಡಿತು.

ನಾಡಿನಲ್ಲಿ ರಂಗಜಂಗಮರೆಂದೇ ಖ್ಯಾತಿ ಗಳಿಸಿರುವ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಜಗದ್ಗುರು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜನಪರ ಹೋರಾಟಗಾರ, ಕವಿ ಡಾ.ಬಂಜಗೆರೆ ಜಯಪ್ರಕಾಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಎಚ್.ಅಂಜಿನಪ್ಪ, ನ್ಯಾಯವಾದಿ ಪ್ರತಾಪ್ ಜೋಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾತುಗಳು ನಮ್ಮಲ್ಲಿ ಉತ್ಸಾಹ ತುಂಬಿದವು.

ಅದರಲ್ಲೂ ಸಾಣೇಹಳ್ಳಿ ಶ್ರೀಗಳ ಮೊನಚು ಮಾತು, ಬಂಜಗೆರೆ ಜಯಪ್ರಕಾಶ್ ಅವರ ಚಿಂತನೆ, ಎಂಎಲ್ ಸಿ. ಕೆ.ಎಸ್.ನವೀನ್ ಚುಟುಕು ಭಾಷಣ ನಮ್ಮನ್ನು ಎಚ್ಚರಿಸುವ ಜೊತೆಗೆ ಸಾಮಾಜಿಕ ಕಾಳಜಿಯೇ ಮಾಧ್ಯಮ ಕ್ಷೇತ್ರದ ಆಶಯವಾಗಿರಬೇಕು ಎಂಬ ಸಂದೇಶ ಕಿವಿಗೆ ಅಪ್ಪಳಿಸಿತು.

ಜೊತೆಗೆ News Portal ಒಂದು ಇಂತಹ ಕಚೇರಿ ಆರಂಭಿಸಿ, ವಿಚಾರಸಂಕಿರಣ ಹಮ್ಮಿಕೊಳ್ಳಲು ಮುಖ್ಯ ಕಾರಣವಾದ GNI program ನ ಫಂಡಿಂಗ್, ಸಹಕಾರ, ಪ್ರೋತ್ಸಾಹವನ್ನು ಇಡೀ ಸಭೆ ಮುಕ್ತಕಂಠದಿಂದ ಶ್ಲಾಘಿಸಿದ್ದು ಜನಪರ ಕಾರ್ಯಕ್ಕೆ ಸದಾ ಜನಬೆಂಬಲ ಇರಲಿದೆ ಎಂಬುದು ಸಮಾರಂಭ ಸಾಕ್ಷೀಕರಿಸಿತು.

ಬಿಸಿಸುದ್ದಿ.ಕಾಂ ಗೆ ಇರಲಿ ನಿಮ್ಮ ಬೆಂಬಲ

ಸಣ್ಣದಾಗಿ ಆರಂಭವಾದ ನಿಮ್ಮ ಬಿಸಿಸುದ್ದಿ ಚಿತ್ರದುರ್ಗದಲ್ಲಿ ಕಚೇರಿ, ಸಂದರ್ಶನದ ಸ್ಟುಡಿಯೋ ಆರಂಭಿಸಿದೆ. ನೀವುಗಳು ಖುದ್ದು ಭೇಟಿ ನೀಡಬಹುದು.  ಅಥವಾ ವಾಟ್ಸ್ ಆ್ಯಪ್, ಇಮೇಲ್ ಮೂಲಕ ಅಪರೂಪದ ಸುದ್ದಿಗಳನ್ನು ಕಳುಹಿಸಬಹುದು.

 

 

ಇಂತಿ

ನಿಮ್ಮವ

ಚಳ್ಳಕೆರೆ ಬಸವರಾಜ್

ಸಂಪಾದಕ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement