ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಹೊಸ ಅವಕಾಶ ಬಂದಿದೆ – ಒಟ್ಟು 260 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಇದು ಕೇವಲ ಉದ್ಯೋಗವಲ್ಲ – ದೇಶಸೇವೆಯ ಜೊತೆಗೆ ಉತ್ತಮ ವೃತ್ತಿಜೀವನಕ್ಕೆ ಮೊದಲ ಹೆಜ್ಜೆಯಾಗಿದೆ. ಆದರೆ ಅರ್ಜಿ ಸಲ್ಲಿಸಲು ಕೇವಲ ಕೆಲವೇ ದಿನಗಳು ಉಳಿದಿವೆ.
ಕೇಂದ್ರ ಸರ್ಕಾರಿ ಹುದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸಿಹಿ ಸುದ್ದಿಯಾಗಿದೆ. ಹೌದು ಭಾರತೀಯ ನೌಕಾಪಡೆಯಿಂದ 2025ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಇದು ಭದ್ರ ಭವಿಷ್ಯಕ್ಕೆ ಒಂದು ದಾರಿ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ,
ಅಭ್ಯರ್ಥಿಗಳು 01/09/2025 ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತೀಯ ನೌಕಾಪಡೆಯ ಅಧಿಸೂಚನೆಯಡಿಯಲ್ಲಿ ಕಾರ್ಯನಿರ್ವಾಹಕ ಶಾಖೆ {GS(X)/ ಹೈಡ್ರೋ ಕೇಡರ್}, ಪೈಲಟ್, ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ, ವಾಯು ಸಂಚಾರ ನಿಯಂತ್ರಕ, ಲಾಜಿಸ್ಟಿಕ್ಸ್, ನೌಕಾ ಶಸ್ತ್ರಾಸ್ತ್ರ ಪರಿವೀಕ್ಷಣೆ ಕೇಡರ್ ಮತ್ತು ಕಾನೂನು ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು 260 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ.
ಈ ನೇಮಕಾತಿಯ ವೇತನ ಪ್ಯಾಕೇಜ್ ಆಕರ್ಷಕವಾಗಿದ್ದುಇದರ ಜೊತೆಗೆ ಪ್ರಯಾಣ ಭತ್ಯೆ, ವಸತಿ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯಗಳು ಇರಲಿದೆ.
ಹುದ್ದೆಗಳ ವಿವರ : 260ಕಾರ್ಯನಿರ್ವಾಹಕ ಶಾಖೆ {GS(X)/ ಹೈಡ್ರೋ ಕೇಡರ್} : 57ಪೈಲಟ್ : 24ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ (ವೀಕ್ಷಕರು) : 20ವಾಯು ಸಂಚಾರ ನಿಯಂತ್ರಕ (ATC) : 20ಲಾಜಿಸ್ಟಿಕ್ಸ್ : 10ನೌಕಾ ಶಸ್ತ್ರಾಸ್ತ್ರ ಪರಿವೀಕ್ಷಣೆ ಕೇಡರ್ (NAIC) : 20ಕಾನೂನು : 02ವಿದ್ಯಾಭ್ಯಾಸ : 15 ಎಂಜಿನಿಯರಿಂಗ್ ಶಾಖೆ {ಸಾಮಾನ್ಯ ಸೇವೆ (GS)} : 36ವಿದ್ಯುತ್ ಶಾಖೆ {ಸಾಮಾನ್ಯ ಸೇವೆ (GS)} : 40ನೌಕಾ ನಿರ್ಮಾಣಕಾರ : 16
ವಯೋಮಿತಿ : ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ದಿನಾಂಕಗಳ ನಡುವೆ ಜನಿಸಿರಬೇಕು.- ಕಾರ್ಯನಿರ್ವಾಹಕ ಶಾಖೆ {GS(X)/ ಹೈಡ್ರೋ ಕೇಡರ್}: 02 ಜುಲೈ 2001 ರಿಂದ 01 ಜನವರಿ 2007 ರವರೆಗೆ- ಪೈಲಟ್: 02 ಜುಲೈ 2002 ರಿಂದ 01 ಜುಲೈ 2007- ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ (ವೀಕ್ಷಕರು): 02 ಜುಲೈ 2002 ರಿಂದ 01 ಜುಲೈ 2007- ವಾಯು ಸಂಚಾರ ನಿಯಂತ್ರಕ (ATC): 02 ಜುಲೈ 2002 ರಿಂದ 01 ಜುಲೈ 2007 ರವರೆಗೆ- ಲಾಜಿಸ್ಟಿಕ್ಸ್: 02 ಜುಲೈ 2001 ರಿಂದ 01 ಜನವರಿ 2007 ರವರೆಗೆ- ನೌಕಾ ಶಸ್ತ್ರಾಸ್ತ್ರ ಪರಿವೀಕ್ಷಕ ಕೇಡರ್ (NAIC): 02 ಜುಲೈ 2001 ರಿಂದ 01 ಜನವರಿ 2007 ರವರೆಗೆ- ಕಾನೂನು: 02 ಜುಲೈ 1999 ರಿಂದ 01 ಜುಲೈ 2004 ರವರೆಗೆ- ಶಿಕ್ಷಣ: ಜುಲೈ 02, 2001 ರಿಂದ ಜುಲೈ 01, 2005 ರವರೆಗೆ- ಎಂಜಿನಿಯರಿಂಗ್ ಶಾಖೆ {ಸಾಮಾನ್ಯ ಸೇವೆ (GS)}: 02 ಜುಲೈ 2001 ರಿಂದ 01 ಜನವರಿ 2007 ರವರೆಗೆ- ವಿದ್ಯುತ್ ಶಾಖೆ {ಸಾಮಾನ್ಯ ಸೇವೆ (GS)}: 02 ಜುಲೈ 2001 ರಿಂದ 01 ಜನವರಿ 2007 ರವರೆಗೆ- ನೌಕಾ ನಿರ್ಮಾಣಕಾರ: 02 ಜುಲೈ 2001 ರಿಂದ 01 ಜನವರಿ 2007 ರವರೆಗೆ 🎓 ಶೈಕ್ಷಣಿಕ ಅರ್ಹತೆ:ಬಿಇ/ ಬಿ.ಟೆಕ್, MCA, M.Sc (IT), ಎಂಬಿಎ ಪದವಿ, ಅಥವಾ ಬಿ.ಎಸ್ಸಿ/ ಬಿ.ಕಾಂ/ ಬಿ.ಎಸ್ಸಿ(ಐಟಿ) ಪದವಿ ಜೊತೆಗೆ ಹಣಕಾಸು / ಲಾಜಿಸ್ಟಿಕ್ಸ್ / ಸರಬರಾಜು ಸರಪಳಿ ನಿರ್ವಹಣೆ / ವಸ್ತು ನಿರ್ವಹಣೆಯಲ್ಲಿ ಪಿಜಿ ಡಿಪ್ಲೊಮಾ ಅಥವಾ ಬಿಎಸ್ಸಿ ವಿದ್ಯಾರ್ಹತೆಯನ್ನು ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕೆ.
ವೇತನ : ಮಾಸಿಕ ವೇತನ : ವೇತನವು ತಿಂಗಳಿಗೆ ರೂ. 1,10,000/- (ಅಂದಾಜು)
ಪ್ರಮುಖ ದಿನಾಂಕಗಳು :ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-08-2025ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:01-09-2025