ಚಿತ್ರದುರ್ಗ : ಮಣ್ಣಿನ ವಾಸನೆಯೊಂದಿಗೆ ಬದುಕುವ ಕಿಲಾರಿಗಳಲ್ಲಿ ಸಮರ್ಪಣಾ ಮನೋಭಾವವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಸಹಯೋಗದೊಂದಿಗೆ ಇಲ್ಲಿನ ಸರ್ಕಾರಿ ಕಲಾ ಕಾಲೇಜು(ಸ್ವಾಯತ್ತ) ಇಲ್ಲಿ ಸೋಮವಾರ ನಡೆದ ಕಿಲಾರಿ ಕಲರವ ಉದ್ಗಾಟಿಸಿ ಮಾತನಾಡಿದರು.
ಗುಡುಗು, ಸಿಡಿಲು, ಮಳೆ, ಗಾಳಿ ಇದ್ಯಾವುದನ್ನು ಲೆಕ್ಕಿಸದೆ ಸಮಾಜ, ನೆಲ, ಸಮುದಾಯ ಪ್ರಕೃತಿಗಾಗಿ ಬದುಕುವ ಕಿಲಾರಿಗಳು ಬೆಳ್ಳಿ, ಬಂಗಾರ, ಕಂಚು
ಹಿತ್ತಾಳೆ ಯಾವುದಕ್ಕೂ ಆಸೆ ಪಡುವವರಲ್ಲ. ಪ್ರಕೃತಿಯೊಂದಿಗೆ ಬದುಕನ್ನು ಸಮರ್ಪಿಸಿಕೊಳ್ಳುವ ಕಿಲಾರಿಗಳನ್ನು ಒಳಗಣ್ಣಿನಿಂದ ನೋಡಬೇಕು. ಬಾಹ್ಯ ಸೌಂದರ್ಯಕ್ಕೆ ಆಕರ್ಷಿತರಾಗಿ ಮಾನವ ಹಾಳಾಗುತ್ತಿದ್ದಾನೆಂದು ವಿಷಾಧಿಸಿದರು.
ಬುದ್ದ, ಬಸವ, ಅಂಬೇಡ್ಕರ್ ಇವರುಗಳನ್ನೆಲ್ಲಾ ಒಂದೊಂದು ಹೆಜ್ಜೆಯನ್ನಾಗಿಸಿಕೊಂಡು ನಡೆಯಬೇಕು. ಕಿಲಾರಿಗಳು ಕಾವ್ಯವನ್ನು ಸೃಷ್ಟಿಸಿಲ್ಲ. ಆದರೂ ಕವಿಗಳು. ಯುದ್ದ, ಆಕ್ರಮ, ರಕ್ತವನ್ನು ಬಯಸುತ್ತದೆ. ಬುದ್ದ ಶಾಂತಿಯನ್ನು ಪ್ರತಿಪಾದಿಸುತ್ತಾನೆ. ಹೆಣ್ಣು-ಗಂಡನ್ನು ಸಮಾನವಾಗಿ ನೋಡುವ ಕಣ್ಣುಗಳು ಬೇಕು. ಮಾತೊಂದು, ಮನಸ್ಸೊಂದು
ನಡೆಯೊಂದು, ನುಡಿಯೊಂದಿದ್ದಾಗ ಸಮ ಸಮಾಜ ಕಟ್ಟಲು ಆಗುವುದಿಲ್ಲ. ಮೊಬೈಲ್ನಿಂದ ಆತಂಕ. ಭಯ ಕಾಡುತ್ತಿದೆ. ಪರಂಪರೆಯ ಪಾದದ ಸ್ಪರ್ಶ ಮರೆತಿದ್ದೇವೆ. ಬೂಟಾಟಿಕೆ, ಆಡಂಭರ, ಅಟ್ಟಹಾಸವಿರುವ ಕಡೆ ವಾಸ್ತವವಿರುವುದಿಲ್ಲ. ಅಸಹನೆ, ಅಹಂಕಾರ, ಇರುವ ಕಡೆ ಸ್ನೇಹ ಸಂಬಂಧಕ್ಕೆ ಜಾಗವಿರುವುದಿಲ್ಲ. ಪ್ರೀತಿಗಿಂತ ದೊಡ್ಡ ಆಯುಧ ಜಗತ್ತಿನಲ್ಲಿ ಯಾವುದೂ ಇಲ್ಲ. ವಕ್ರವಾದ ಸಂಸ್ಕøತಿ, ಅಭಿವೃದ್ದಿಯ ವೇಗದಲ್ಲಿ ಸಂಬಂಧಗಳು ನಶಿಸುತ್ತಿವೆ ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ ನಿರ್ಲಕ್ಷಿತ ಸಮುದಾಯಗಳ ಜ್ಞಾನ, ಪರಂಪರೆಯನ್ನು ಶೋಧಿಸುವ ಸಂಶೋಧನೆಗಳು ನಡೆಯಬೇಕು. ನೆಲದ ಅರಿವು, ಪ್ರಜ್ಞೆ, ಬೆಳಕು, ತತ್ವಪದಕಾರರ ನಾಥ, ಸಿದ್ದ, ಅವಧೂತರ ಪರಂಪರೆಯನ್ನು ಒಳಗೊಂಡಂತೆ ಕಿಲಾರಿಗಳ ಚರಿತ್ರೆಯನ್ನು ಶೈಕ್ಷಣಿಕ ಶಿಸ್ತಿನೊಳಗೆ ದಾಖಲಿಸುವ ಪ್ರಯತ್ನವಾಗಬೇಕೆಂದರು.
ಬಯಲ ಬದುಕನ್ನು ಕಟ್ಟಿಕೊಂಡ ಬಡುಕಟ್ಟು ಸಮುದಾಯದ ಚರಿತ್ರೆ ಮತ್ತು ಜ್ಞಾನವನ್ನು ಸಮಕಾಲೀನ ಸಂದರ್ಭಕ್ಕೆ ಮುಖಾಮುಖಿಗೊಳಿಸುವ ಅನಿವಾರ್ಯತೆಯಲ್ಲಿದ್ದೇವೆಂದು ಹೇಳಿದರು. ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಟಿ.ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ತಾರಿಣಿ ಶುಭದಾಯಿನಿ, ಸಮಾಜಶಾಸ್ತ್ರ ವಿಭಾಗದ ಪ್ರೊ.ಯಶೋಧಮ್ಮ, ಸಾಂಸ್ಕøತಿಕ ಕಾರ್ಯದರ್ಶಿ ಕೆ.ಮಂಜುನಾಥ್ ವೇದಿಕೆಯಲ್ಲಿದ್ದರು.