ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಕಳೆದ ಮಾರ್ಚ್ ನಲ್ಲಿ ತುಟ್ಟಿಭತ್ಯೆಯನ್ನು ಶೇಕಡ 4ರಷ್ಟು ಹೆಚ್ಚಳ ಮಾಡಿದ ಬೆನ್ನಲ್ಲೇ ನೌಕರರ ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ನಿವೃತ್ತಿ ಗ್ರಾಚ್ಯುಟಿ ಸಹ ಶೇಕಡ 25ರಷ್ಟು ಏರಿಕೆ ಮಾಡಲಾಗಿದೆ.
ನಿವೃತ್ತಿ ಗ್ರಾಚ್ಯುಟಿ ಮೊತ್ತ 20 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ತುಟ್ಟಿ ಭತ್ಯೆಯನ್ನು ಶೇ. 4ರಷ್ಟು ಹೆಚ್ಚಳ ಮಾಡಿದ್ದರಿಂದ ನೌಕರರು ಪಡೆಯುತ್ತಿರುವ ಒಟ್ಟು ತುಟ್ಟಿಭತ್ಯೆ ಪ್ರಮಾಣ ಶೇಕಡ 50 ದಾಟಿದ ಹಿನ್ನೆಲೆಯಲ್ಲಿ ಇತರೆ ಭತ್ಯೆಗಳು ಏರಿಕೆಯಾಗಿವೆ.
ಇದರಿಂದಾಗಿ ಬೆಲೆ ಏರಿಕೆ ಬಿಸಿ ಸ್ವಲ್ಪ ಕಡಿಮೆಯಾಗಲಿದೆ. ಸಿಬ್ಬಂದಿ ಮತ್ತು ಸಾರ್ವಜನಿಕ ಕೊಂದು ಕೊರತೆ ಸಚಿವಾಲಯವು ಕಳೆದ ಏಪ್ರಿಲ್ 24ರಂದು ಹೊರಡಿಸಿದ ಜ್ಞಾಪನದಲ್ಲಿ ಈ ಮಾಹಿತಿ ನೀಡಲಾಗಿದೆ.