ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್(ಪಿಎಂ ಕಿಸಾನ್) ಯೋಜನೆಯ 22ನೇ ಕಂತಿನ ಹಣವನ್ನು ಮಾರ್ಚ್ 13ರಂದು ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲಾಗುವುದು.
ಮಾರ್ಚ್ 13ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರುಪಿಎಂ ಕಿಸಾನ್ ಯೋಜನೆಯ ಹಣದ ಡಿಜಿಟಲ್ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ದೇಶಾದ್ಯಂತ 9.32 ಕೋಟಿ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂ.ಗಳನ್ನು ವರ್ಗಾಯಿಸಲಾಗುವುದು ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಎಂ ಕಿಸಾನ್ ಯೋಜನೆಯನ್ನು ಮೋದಿ ಸರ್ಕಾರ 2019ರಲ್ಲಿ ಆರಂಭಿಸಿದ್ದು, ವಾರ್ಷಿಕ 6,000 ರೂ.ಗಳನ್ನು ತಲಾ 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ಪಾವತಿಸಲಾಗುವುದು. 22ನೇ ಕಂತಿನಲ್ಲಿ ಒಟ್ಟು 19,000 ಕೋಟಿ ರೂಪಾಯಿಗಳನ್ನು ಫಲಾನುಭವಿ ರೈತರ ಖಾತೆಗೆ ತಲಾ 2 ಸಾವಿರ ರೂ. ಜಮಾ ಮಾಡಲಾಗುವುದು































