ರಾಜ್ಯದಲ್ಲಿ ಅತೀ ಶೀಘ್ರ ಗೃಹಲಕ್ಷ್ಮಿಯರ ಮಾಸಿಕ ಹಣ ಹೆಚ್ಚಳ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ 2000 ರೂ. ಮಾಸಿಕವಾಗಿ ನೀಡಲಾಗುತ್ತಿದೆ. ಅದನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಆಗ ಗೃಹಲಕ್ಷ್ಮಿಯರ ಮಾಸಿಕ ಹಣ 2000 ರೂ. ನಿಂದ 2300
ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
ರಾಜ್ಯದ ಒಟ್ಟು ಆರ್ಥಿಕ ಸ್ಥಿತಿ ಪರಿಗಣಿಸಿ ಇದರ ಅಂತಿಮ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ ಬರಲಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.