ಸರ್ಕಾರಿ ಉದ್ಯೋಗ ಮಾಡಬಯಸುವವರಿಗೆ ಗುಡ್ ನ್ಯೂಸೊಂದು ಸಿಕ್ಕಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಟ್ರೈ ಮಾಡಬಹುದು.
ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳ ಎಂ.ಟಿ.ಎಸ್ ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗಾಗಿ ಮಾನ್ಯತೆ ಪಡೆದ ಮಂಡಳಿಯಿಂದ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳಿಂದ ವೆಬ್‌ಸೈಟ್ https://ssp.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅನ್‌ಲೈನ್ ನೋಂದಣಿಗೆ ಜುಲೈ 24 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 080-25502520 ಅನ್ನು ಸಂಪಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.