ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ 2,000 ಹಣ ಸಿಗದೇ ಇದ್ದು ನಿರಾಶರಾಗಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರೇಷನ್ ಕಾರ್ಡ್‌ನಲ್ಲಿ ‘ಮನೆ ಯಜಮಾನಿ’ ಎಂದು ತಿದ್ದುಪಡಿ ಮಾಡಲು ಇಂದಿನಿಂದ ಸೆಪ್ಟೆಂಬರ್ 10ರವರೆಗೆ ಕಾಲಾವಕಾಶ ನೀಡಿದೆ. ಆನ್‌ಲೈನ್/ಆಫ್‌ಲೈನ್ ಮೂಲಕ ನೀವು ತಿದ್ದುಪಡಿ ಮಾಡಬಹುದು.
ಪಡಿತರ ಚೀಟಿಯಲ್ಲಿ ಪುರುಷರೇ ಮುಖ್ಯಸ್ಥರಾಗಿದ್ದರೆ ನಿಮಗೆ 2,000 ಸಿಗುವುದಿಲ್ಲ. ಹೀಗಾಗಿ ನಿಗದಿತ ಕಾಲಮಿತಿಯೊಳಗೆ ಮನೆಯ ಯಜಮಾನಿಯ ಹೆಸರು ಸೇರಿಸಿ.