ಚಿನ್ನಾಭರಣ ಖರೀದಿಸುವವರ ಯೋಚನೆಯಲ್ಲಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಹೌದು, 8,000 ರೂ. ದಾಟಿದ್ದ ಆಭರಣ ಚಿನ್ನದ ಬೆಲೆ 7,940 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,700 ರೂಗಿಂತ ಒಳಗೆ ಬಂದಿದೆ.
18 ಕ್ಯಾರಟ್ ಚಿನ್ನದ ಬೆಲೆಯೂ 6,500 ರೂಗಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ನಿನ್ನೆ ಅಲ್ಪ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ಲ 22 ಕ್ಯಾರಟ್ ಚಿನ್ನದ ಬೆಲೆ 79,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 86,670 ರುಪಾಯಿ ಆಗಿದೆ.