ಬೆಂಗಳೂರು: ಹೊಸದಾಗಿ ಮಕ್ಕಳನ್ನ ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಸಂಬಂಧ ಸಚಿವರು ಭರವಸೆ ನೀಡಿದ್ದು, ಮುಂದಿನ ಎರಡ್ಮೂರು ದಿನಗಳ ಒಳಗಾಗಿ ನಿರ್ಧಾರ ಆಗಲಿದೆ.
ಇಷ್ಟು ದಿನ ಮಕ್ಕಳು 1ನೇ ತರಗತಿಗೆ ಅಡ್ಮಿಷನ್ ಪಡೆಯುವುದಕ್ಕೆ ಆರು ವರ್ಷ ತುಂಬಿರಬೇಕು ಎಂದು ಹೇಳಲಾಗಿತ್ತು. ಈಗ ಕೋರ್ಟ್ ಬಿಟ್ಟು ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮ ಅನ್ನೋದು ಕೂಡ ಇದೆ.
ಈ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಕ್ಕಳಿಗೆ, ಪೋಷಕರಿಗೆ ತೊಂದರೆಯಾಗಬಾರದು. ಅದರಲ್ಲೂ ಯಾವುದೇ ಮಗುವಿನ ವರ್ಷಗಳು ವೇಸ್ಟ್ ಆಗಬಾರದು. ಈ ಸಂಬಂಧ ಎರಡು ದಿನ ಸಭೆ ಮಾಡಿದ್ದೇವೆ.
ಮುಂದಿನ ಎರಡರ ಮೂರು ದಿನಗಳ ಒಳಗೆ ಒಳ್ಳೆಯ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಈ ಸುದ್ದಿ ಪೋಷಕರಿಗೆ ಕೊಂಚ ನಿರಾಳ ಎನಿಸಿದೆ. ಎಲ್ಕೆಜಿ, ಯುಕೆಜಿ ಶಿಕ್ಷಣ ಮುಗಿದ ಮೇಲೆ ನೇರವಾಗಿ ಒಂದನೇ ತರಗತಿಗೆ ಹೋಗಬೇಕು.
ಆದರೆ ಒಂದೆರಡು ದಿನಗಳ ಕಾಲ ಕಡಿಮೆ ಇದ್ದರು ಶಾಲೆಯಲ್ಲಿ ಅಡ್ಮಿಷನ್ ಮಾಡಿಕೊಳ್ಳುವುದಕ್ಕೆ ಅವಕಾಶವೇ ಇರಲಿಲ್ಲ. ಈಗ ಪೋಷಕರಿಗೆ ಸಮಾಧಾನ ತರಿಸಿದೆ. ಈ ರೂಲ್ಸ್ ಆದಷ್ಟು ಬೇಗ ಬರಲಿ ಎಂದೇ ಮಾತಾಡಿಕೊಳ್ಳುತ್ತಿದ್ದಾರೆ