ನಾವು ಎಲ್ಲಿಗಾದರೂ ಪ್ರಯಾಣ ಮಾಡುವಾಗ ಟೋಲ್ ಪ್ಲಾಜಾದಲ್ಲಿ ಪದೇ ಪದೇ ಟೋಲ್ ಕಟ್ಟೋ ಕಿರಿಕಿರಿಗೆ ರೋಸಿ ಹೋಗಿರ್ತೇವೆ. ಇದೀಗ ವಾಹನ ಸವಾರರಿಗೆ ಶುಭಸುದ್ದಿಯೊಂದು ಕೇಳಿಬಂದಿದೆ. ಈ ಬಗ್ಗೆ ಖುದ್ದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ.
ಸರ್ಕಾರವು ಮೂರು ಸಾವಿರ ರೂ. ಪಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಸೌಲಭ್ಯ ಪ್ರಾರಂಭಿಸುತ್ತಿದ್ದು ಇದನ್ನು ಅಗಸ್ಟ್ ಹದಿನೈದರಿಂದ ನೀಡಲಾಗುವುದು. ಇದನ್ನು ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ನೀಡಲಾಗುತ್ತದೆ.
ಈ ಪಾಸ್ ಇದ್ದರೆ ಒಂದು ಟ್ರಿಪ್ ಗೆ ಕೇವಲ ಹದಿನೈದು ರೂಪಾಯಿ ಪಾವತಿಸಿದರೆ ಸಾಕು. ಕೇಂದ್ರ ಸರ್ಕಾರದ ಈ ಯೋಜನೆ ಪ್ರಯಾಣವನ್ನು ಅಗ್ಗವಾಗಿಸಲಿದೆ.