ಪಿಎಂ ಕಿಸಾನ್ 20ನೇ ಕಂತಿನ ಹಣ ಹಣ ಇಂದು ಅಂದರೆ ಆಗಸ್ಟ್ 02 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಲಿದ್ದಾರೆ, ಈ ಮೂಲಕ ರೈತರ ಖಾತೆಗೆ 2000 ರೂ. ನೇರವಾಗಿ ಜಮೆಯಾಗಲಿದೆ,ಈ ಮೂಲಕ ಕಿಸಾನ್ ಯೋಜನೆಯ ಹಣ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯುವ ಅಧಿವೇಶನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ವನ್ನು ಕಿಸಾನ್ ಫಲಾನುಭವಿಗಳಿಗೆ ನೇರವಾಗಿ ಖಾತೆಗೆ ಡಿಬಿಟಿ ಮೂಲಕ ಬಿಡುಗಡೆ ಮಾಡಲಿದ್ದಾರೆ.
ಈ ಬಾರಿಯ ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನಲ್ಲಿ ₹20,500 ಕೋಟಿ ಹಣವು ಬಿಡುಗಡೆಗೊಳ್ಳಲಿದ್ದು, ಸುಮಾರು 9.70 ಕೋಟಿ ಕಿಸಾನ್ ಫಲಾನುಭವಿಗಳ ಖಾತೆಗೆ ಈ ಯೋಜನೆಯಲ್ಲಿ 2000 ರೂ. ನೇರವಾಗಿ ಖಾತೆಗೆ ಜಮೆಯಾಗಲಿದೆ.
ಪಿಎಂ ಕಿಸಾನ್ ಯೋಜನೆ ಹಣ ಯಾರಿಗೆ ಸಿಗಲಿದೆ?
2019ರಲ್ಲಿ ಜಾರಿಯಾದ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ದೇಶದ ರೈತರಿಗೆ ಕೃಷಿ ಚಟುವಟಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತಂದಿದ್ದು,
ವಾರ್ಷಿಕಾಗಿ ಒಟ್ಟು 6,000 ಸಾವಿರ ರೂಪಾಯಿಗಳನ್ನು 2,000 ರೂ. ನಂತೆ 3 ಕಂತುಗಳಲ್ಲಿ ಕಿಸಾನ್ ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆಗಳಿಗೆ ಹಣ ಜಮೆ ಮಾಡಲಾಗುತ್ತದೆ,
ಕೊನೆಯದಾಗಿ 19ನೇ ಕಂತಿನ ಹಣವು ಫೆಬ್ರುವರಿಯಲ್ಲಿ ಜಮೆ ಮಾಡಲಾಗಿತ್ತು.
ಪಿಎಂ ಕಿಸಾನ್ ಹಣ ಪಡೆಯಲು ಇರಬೇಕಾದ ಅರ್ಹತೆಗಳು
- ನಿಮ್ಮ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
- ಕಿಸಾನ್ ಪೋರ್ಟಲ್ ನಲ್ಲಿ e-kyc ಮಾಡಿಸಿರಬೇಕು.
- ನಿಮ್ಮ ಭೂ ದಾಖಲೆಗಳು ಬದಲಾಗಿದ್ದಲ್ಲಿ ತಕ್ಷಣ ಅದನ್ನು ಕಿಸಾನ್ ಖಾತೆಯಲ್ಲಿ ಅಪ್ಡೇಟ್ ಮಾಡಿಸಿರಬೇಕು.
ನಿಮ್ಮ ಪಿಎಂ ಖಾತೆ ಸ್ಥಿತಿಯನ್ನು ಈ ರೀತಿಯಾಗಿ ಚೆಕ್ ಮಾಡಿ
- ನಿಮ್ಮ ಪಿಎಂ ಕಿಸಾನ್ ಖಾತೆ ಸ್ಥಿತಿ ಚೆಕ್ ಮಾಡಲು https://pmkisan.gov.in/ ಗೆ ಭೇಟಿ ನೀಡಿ.
- beneficiary status ಆಯ್ಕೆ ಮಾಡಿ
- ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ದಾಖಲಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.