ನವದೆಹಲಿ : ಪ್ರತಿಯೊಬ್ಬರಿಗೂ ಐಎಎಸ್ ಅಧಿಕಾರಿ ಆಗುವುದು ಎಂದರೆ ಅದೊಂದು ದೊಡ್ಡ ಕನಸು. ಇಷ್ಟದ ಕನಸು. ಅದೆಷ್ಟರ ಮಟ್ಟಿಗೆ ಎಂದರೆ ಗೂಗಲ್ನಲ್ಲಿ ಕೆಲಸ ಗಿಟ್ಟಿಸಿ, ಕೈತುಂಬ ಸಂಬಳ ಪಡೆದರೂ ಸಹ, ಆ ಕೆಲಸಕ್ಕಿಂತ ಹೆಚ್ಚಾಗಿ ಈ ಐಎಎಸ್ ಪರೀಕ್ಷೆ ಪಾಸ್ ಮಾಡಿ, ಭಾರತೀಯ ಆಡಳಿತ ಸೇವೆಗೆ ಸೇರುವುದೇ ಒಂದು ಸಾಧನೆ. ಎಂಬಿಬಿಎಸ್ ಮಾಡಿದ್ದರೂ, ಗೂಗಲ್, ಮೈಕ್ರೋಸಾಫ್ಟ್, ಹೀಗೆ ದೊಡ್ಡ ಕಂಪನಿಗಳ ಕೆಲಸವನ್ನು ಬಿಟ್ಟು ಈ ಸೇವೆಗಾಗಿ ಹಾತೊರೆಯುತ್ತಾರೆ. ಇಂತಹ ಸ್ಪೂರ್ತಿದಾಯಕ ವಾದ ಅನುದೀಪ್ ಅವರ ಸಾಧನೆಯನ್ನು ತಿಳಿಯೋಣ.
ಅನುದೀಪ್ ದುರಿಶೆಟ್ಟಿ, ಭಾರತೀಯ ಆಡಳಿತ ಸೇವೆಗಳ (ಐಎಎ) ಅಧಿಕಾರಿ, ಇವರು 2017 ನೇ ಸಾಲಿನ ಸಿವಿಲ್ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿ 01 ರಲ್ಲಿ ಪಾಸಾದವರು. ಇದು ಅವರ ಐದನೇ ಪ್ರಯತ್ನವಾದರೂ ಸಹ, ತಾವೊಂದುಕೊಂಡ ಗುರಿಯನ್ನು ಛಲಬಿಡದೇ ಸಾಧಿಸಿದರು.
ಅನುದೀಪ್ ದುರಿಶೆಟ್ಟಿ ಪದವಿ ಶಿಕ್ಷಣದ ನಂತರ ಗೂಗಲ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದವರು. ಆದರೂ ಸಹ ಸಿವಿಲ್ ಸರ್ವೆಂಟ್ ಆಗಬೇಕೆಂಬ ಬಲವಾದ ಆಸೆ, ಅವರ ಲಾಭದಾಯಕ ಮತ್ತು ಅಧಿಕ ಸಂಬಳದ ಉದ್ಯೋಗವನ್ನು ತ್ಯಜಿಸಲು ಪ್ರೇರಣೆ ಆಗಿತ್ತು. 2012 ರಲ್ಲಿ ಅವರ ಮೊದಲ ಯುಪಿಎಸ್ಸಿ ಪ್ರಯತ್ನ ವಿಫಲವಾಯಿತು. ನಂತರ 2013 ರಲ್ಲಿ ಅವರು ಭಾರತೀಯ ಆದಾಯ ತೆರಿಗೆ ಸೇವೆಗೆ ಆಯ್ಕೆಯಾದರೂ ಮತ್ತು ಕಸ್ಟಮ್ಸ್ ಮತ್ತು ಕೇಂದ್ರ ಆಮದು ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದರು.
ದೇಶದ ಅತ್ಯುತ್ತಮ ಅಧಿಕಾರಿ ಸೇವೆ ಐಎಎಸ್ ಅಧಿಕಾರಿ ಆಗುವ ಹಂಬಲ ಇದ್ದ ಕಾರಣ ಐಆರ್ಎಸ್ ಸೇವೆಗೆಯೇ ಅವರು ಕನಸು ಅಂತ್ಯವಾಗಲಿಲ್ಲ. ಆದ್ದರಿಂದ 2014 ಮತ್ತು 2015 ರ ಪ್ರಯತ್ನಗಳನ್ನು ಮಾಡಿದರು. ಆದರೂ ಈ ಪ್ರಯತ್ನಗಳಲ್ಲಿಯೂ ಐಎಎಸ್ ಆಗುವ ಕನಸು ನನಸಾಗಲಿಲ್ಲ. ಇಷ್ಟಕ್ಕೆ ತಮ್ಮ ಉತ್ಸಾಹ ಕಳೆದುಕೊಳ್ಳದ ದುರಿಶೆಟ್ಟಿ, ಮತ್ತೆ ಇದರಿಂದ ಹೆಚ್ಚು ಪ್ರೇರಣೆಗೆ ಒಳಗಾದರೂ. ಮತ್ತೆ ಪರೀಕ್ಷೆ ತೆಗೆದುಕೊಂಡ ಅವರು ತಮ್ಮ ಐದನೇ ಪ್ರಯತ್ನದಲ್ಲಿ 2017ನೇ ಸಾಲಿನ ಸಿಎಸ್ಇ ಪರೀಕ್ಷೆ ಫಲಿತಾಂಶದಲ್ಲಿ ದೇಶದ ಟಾಪರ್ ಆಗಿ ಹೊರಹೊಮ್ಮಿದರು. ಅದು ಸಹ ಯಾವುದೇ ಕೋಚಿಂಗ್ ಇಲ್ಲದೇ ಎಂಬುದು ಇನ್ನೂ ಹೆಮ್ಮೆಯ ವಿಷಯವಾಗಿದೆ.
ಈ ಮೂಲಕ ಸರಿಯಾದ ಸಹಪಾಠಿಗಳು ಮತ್ತು ಸರಿಯಾದ ಮನಸ್ಥಿತಿ ಇದ್ದರೆ, ಕೋಚಿಂಗ್ ತರಗತಿಗಳಿಗೆ ಹಣ ಮತ್ತು ಸಮಯವನ್ನು ನೀಡದೆಯೂ ಯುಪಿಎಸ್ಸಿ ಸಿಎಸ್ಇ ಟಾಪರ್ಗಳಾಗಬಹುದು, ಸುಲಭವಾಗಿ ಐಎಎಸ್ ಪಾಸ್ ಮಾಡಬಹುದು ಎಂಬುದಾಗಿದೆ.