ಎಲ್ಲೇ ಹೋಗಬೇಕಿದ್ದರೂ ದಾರಿಯಲ್ಲಿ ಸಿಕ್ಕವರನ್ನು ಕೇಳುವ ಪ್ರಶ್ನೆ ಇಲ್ಲ. ಗೂಗಲ್ ಮ್ಯಾಪ್ ಹಾಕಿದರೆ ಸಾಕು. ಹತ್ತಿರದ ಮಾರ್ಗ, ಕ್ರಮಿಸಬೇಕಾದ ದೂರ, ಸಮಯ ಎಲ್ಲವನ್ನು ಹೇಳುತ್ತೆ.
ಆದರೆ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಜೀವನ ಸುಲಭವಾಗಬೇಕಿತ್ತು. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ನಂಬಿ ಹೋದರೆ ಯಡವಟ್ಟು ಆಗುತ್ತೆ. ಇಲ್ಲೊಬ್ಬ ವರ ಗೂಗಲ್ ಮ್ಯಾಪ್ ನಂಬಿ ಮದುವೆ ಮುಹೂರ್ತ ಮಿಸ್ ಆಗಿದೆ.
ಕೇರಳದ ಕಣ್ಣೂರಿನಲ್ಲಿ ಮದುವೆ ಮಂಟಪಕ್ಕೆ ಹೋಗಬೇಕಾದ ವರ ದಾರಿ ತಪ್ಪಿ ಯಾವುದೋ ಊರಿಗೆ ಹೋಗಿದ್ದಲ್ಲದೇ, ಮುಹೂರ್ತ ಕೂಡ ಮಿಸ್ ಆಗಿರುವ ಪ್ರಸಂಗ ನಡೆದಿದೆ. ತಿರುವನಂತಪುರದ ವರ ಮತ್ತು ಕಣ್ಣೂರಿನ ವಧುವಿಗೆ ಮದುವೆ ನಿಶ್ಚಯವಾಗಿತ್ತು.
ತಾವು ತಲುಪಬೇಕಿದ್ದ ಸ್ಥಳದ ಪಿನ್ಕೋಡ್ ಅನ್ನು ಗೂಗಲ್ ಮ್ಯಾಪ್ನಲ್ಲಿ ತಪ್ಪಾಗಿ ಹಾಕಿದ ಪರಿಣಾಮ ವರ, 70 ಕಿ.ಮೀ ದೂರದ ಮತ್ತೊಂದು ದೇವಸ್ಥಾನಕ್ಕ ಹೋಗಿದ್ದಾರೆ.ಗೂಗಲ್ ಮ್ಯಾಪ್ ನಂಬಿ ಹೊರಟ ಕುಟುಂಬ ಕೀಳೂರಿನ ದೇವಸ್ಥಾನ ತಲುಪುವ ಬದಲು, ಕೋಳಿಕ್ಕೋಡ್ ಜಿಲ್ಲೆಯ ವಡಕರ ಬಳಿಯ ಪಯ್ಯೋಲಿಯ ಕಿಳೂರುನಲ್ಲಿರುವ ಶ್ರೀ ಕಿಳೂರು ಮಹಾಶಿವಕ್ಷೇತ್ರಕ್ಕೆ ಬಂದು ತಲುಪಿದ್ದರು.
ಕರೆ ಮಾಡಿ ಕೇಳಿದಾಗ ವರನ ಕಡೆ ಕುಟುಂಬ ತಪ್ಪಾದ ದೇವಸ್ಥಾನಕ್ಕೆ ಬಂದಿರೋದು ತಿಳಿದು ಬಂತು. ಇತ್ತ ಮುಹೂರ್ತ ಮುಗಿದ ಸುಮಾರು ಮೂರು ಗಂಟೆ ನಂತರ ವರ ಮಂಟಪಕ್ಕೆ ಹಾಜರಾಗಿದ್ದಾರೆ. ವಿಷಯ ತಿಳಿದ ಕುಟುಂಬ ಮತ್ತೆ ಹಿಂದಿರುಗಲು ನಿರ್ಧರಿಸಿದರು. ಆದರೆ ಅರ್ಚಕರು ಶುಭಮುಹೂರ್ತ ಇಟ್ಟ , ವರ ಬಂದ ಕೂಡಲೇ ಮದುವೆ ಕಾರ್ಯಕ್ರಮಗಳನ್ನು ಶುರು ಮಾಡಿದರು.