Google Play Store: ಇಂದಿನ ಯುಗದಲ್ಲಿ ಮೊಬೈಲ್ ಬಳಕೆ ಮಾಡದವರೆ ವಿರಳ. ಬಳಕೆದಾರರ ಸುರಕ್ಷತೆಯ ನಿಟ್ಟಿನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play Store)ಹಲವಾರು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
Google ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಿ ಮಾಲ್‌ವೇರ್ ಮತ್ತು ಜಂಕ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡಲಾಗಿ ಅವುಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರಿಂದ ಬಳಕೆದಾರರು ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಪ್ಲಿಕೇಶನ್‌ಗಳನ್ನು ಬಳಕೆ ಮಾಡಲು ಗೂಗಲ್ ಪ್ಲೇ ಸ್ಟೋರ್ ಅನುವು ಮಾಡಿಕೊಡುತ್ತದೆ.
ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸದ ಕಾರಣಕ್ಕಾಗಿ ತಾಂತ್ರಿಕ ಪರೀಕ್ಷೆಯ ಸಮಯದಲ್ಲಿ, Google SD ಮೇಡ್ ಸೇರಿದಂತೆ ಹಲವಾರು ‘ಕ್ಲೀನರ್’ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಈ ಅಪ್ಲಿಕೇಶನ್‌ಗಳ ಡೆವಲಪರ್‌ಗಳು ರೆಡ್ಡಿಟ್‌ನಲ್ಲಿ ಈ appಗಳ ಬಗ್ಗೆ ಶೇರ್ ಮಾಡಿದ್ದಾರೆ. SD ಮೇಡ್ ಅಪ್ಲಿಕೇಶನ್‌ನ ಸಂದರ್ಭ ತಮ್ಮ ‘ಸ್ಟಾಕರ್‌ವೇರ್ ನೀತಿ’ಯನ್ನು ಉಲ್ಲಂಘಿಸಲಾಗಿದೆ ಎಂದು Google ಹೇಳಿದೆ.
Google ನ ‘Stalkerware ನೀತಿ’ ಯ ಉಲ್ಲಂಘನೆಯಾಗಿದ್ದು, ಡೆವಲಪರ್‌ನ ಕ್ಲೈಮ್ ಅನ್ನು ಪರಿಗಣಿಸಿ, ಬಳಕೆದಾರರ ಗೌಪ್ಯತೆ ಮತ್ತು ಡೇಟಾವನ್ನು ಫಾಲೋ ಮಾಡಲು ಅನುವು ಯಾವುದೇ ವೈಶಿಷ್ಟ್ಯ ಇದರಲ್ಲಿ ಇಲ್ಲ. ಇದರ ಜೊತೆಗೆ, SD ಮೇಡ್‌ನ ಸೊರ್ಸ್ ಕೋಡ್ ಅನ್ನು GitHub ನಲ್ಲಿ ಲಿಸ್ಟ್ ಮಾಡಲಾಗಿದ್ದು,ಎಸ್‌ಡಿ ಮೇಡ್ ಆ್ಯಪ್ ಅನ್ನು ತೆಗೆದುಹಾಕಲಾಗಿದೆ. ಡೆವಲಪರ್ ಖಾತೆಯೊಂದಿಗೆ ಸಂಯೋಜಿತವಾಗಿರುವ ಅಪಾಯಕಾರಿ ಇಲ್ಲವೇ ದುರುಪಯೋಗ ಮಾಡುವ ಮಾದರಿಯನ್ನು ಗುರುತಿಸಲಾಗಿದ್ದು,ಈ ಹಿನ್ನೆಲೆಯಲ್ಲಿ Google Play ಡೆವಲಪರ್ ವಿತರಣಾ ಒಪ್ಪಂದದ ವಿಭಾಗ 8.3/10.3 ಗೆ ಅನುಗುಣವಾಗಿ ಈ ಕ್ರಮವನ್ನು ತೆಗೆದುಕೊಳ್ಳುವುದಾಗಿ ಗೂಗಲ್ ಹೇಳಿದೆ.