ಬೆಂಗಳೂರು: ನಾವು ಸಿನಿಮಾ ಇಲ್ಲದೆ ನಮಗೆ ಬದುಕಲು ಸಾದ್ಯ ಆದರೆ ಸಿನಿಮಾಕ್ಕೆ ಸರ್ಕಾರ ಅನಿವಾರ್ಯ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಇಂದಿನ ಸದನ ಕಲಾಪದಲ್ಲಿ ಪಾಲ್ಗೊಳ್ಳುವ ಮೊದಲು ವಿಧಾನಸಭೆಯ ಆವರಣದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಸಿನಿಮಾ ರಂಗದವರು ಟೀಕೆ ಮಾಡಲಿ ಎಂಬ ಕಾರಣಕ್ಕೆ ನಾನು ನಟ್ಟು ಬೋಲ್ಟು ಎಂಬ ಪದ ಬಳಕೆ ಮಾಡಿದ್ದು ಎಂದರು. ಚಿತ್ರರಂಗಕ್ಕೆ ಒಳ್ಳೆಯದಾಗಲಿ ಅಂತ ಸರ್ಕಾರ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜನೆ ಮಾಡಿದ್ದು. ಅವರೇ ಅದರಲ್ಲಿ ಭಾಗವಹಿಸದಿದ್ದರೆ ಹೇಗೆ ಎಂದು ಡಿಕೆಶಿ ಪ್ರಶ್ನಿಸಿದರು.
ಸಿನಿಮಾದವರಿಗೆ ತಾನು ಸಾಕಷ್ಟು ಸಹಾಯ ಮಾಡಿದ್ದೇನೆ, ಸಹಾಯ ಪಡೆದವರಿಗೆ ಅದು ಚೆನ್ನಾಗಿ ಗೊತ್ತಿದೆ, ಆಯೋಜನೆಯಲ್ಲಿ ಒಂದಷ್ಟು ತಪ್ಪುಗಳಾಗಿರಬಹುದು, ನಿರ್ದೇಶಕ ನಾಗಾಭರಣ ಹೇಳಿರುವುದನ್ನು ಅಪಾರ್ಥ ಭಾವಿಸಲ್ಲ ಎಂಬುವುದಾಗಿ ಶಿವಕುಮಾರ್ ಹೇಳಿದರು.