ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಪ್ರಮುಖ ಮೂರು ರೈಲ್ವೆ ಮೇಲು ಸೇತುವೆಗಳ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಈ ಮೂರು ಮೇಲು ಸೇತುವೆಗಳನ್ನು ನಿರ್ಮಾಣ ಮಾಡಲು ತಗುಲುವ ವೆಚ್ಚ ರೂ.164.00 ಕೋಟಿಯನ್ನು ಶೇ.100 ರಷ್ಟು ಪೂರ್ಣ ಪ್ರಮಾಣದಲ್ಲಿ ರೈಲ್ವೆ ಇಲಾಖೆಯೇ ಭರಿಸಲಿದೆ ಎಂದು ಚಿತ್ರದುರ್ಗ ಸಂಸದರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ನಗರದ ರೈಲ್ವೆಸ್ಟೇಷನ್ ಪಕ್ಕದಲ್ಲಿ ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ಬರುವ ರೈಲ್ವೆ ಗೇಟ್ 22 ಕ್ಕೆ ಮೇಲುಸೇತುವೆ ನಿರ್ಮಾಣಕ್ಕೆ .78.66, ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್ 1 ಕ್ಕೆ ಮೇಲುಸೇತುವೆ ನಿರ್ಮಾಣ ಮಾಡಲು 0.51.72 ಹಾಗೂ ಚಿಕ್ಕಜಾಜೂರು-ಚಿತ್ರದುರ್ಗ ಮಧ್ಯೆ ಬರುವ ಹಳಿಯೂರು ಹತ್ತಿರುವ ರೈಲ್ವೆ ಗೇಟ್-15 ಕೈ ಮೇಲುಸೇತುವೆ ನಿರ್ಮಾಣ ಮಾಡಲು ರೂ.33.65 ಕೋಟಿ. ಈ ರೀತಿ ನೆನೆಗುದಿಗೆ ಬಿದ್ದಿದ್ದ ಈ ಮೂರು ಮೇಲು ಸೇತುವೆಗಳ ನಿರ್ಮಾಣಕ್ಕೆ ರೂ.164.00 ಕೋಟಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ರೈಲ್ವೆ ಇಲಾಖೆ ಸಮ್ಮತಿಸಿದೆ.
ಚಿತ್ರದುರ್ಗ ನಗರ ಪರಿಮಿತಿಯಲ್ಲಿ ಚಿತ್ರದುರ್ಗದಿಂದ-ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ರೈಲ್ವೆ ಸ್ಟೇಷನ್ ಪಕ್ಕದಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್-22ಕ್ಕೆ ಮೇಲುಸೇತುವೆ ನಿರ್ಮಾಣ ಮಾಡಲು ಈ ಮೊದಲು ರೈಲ್ವೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಶೇಕಡ 50:50 ರ ಅನುಪಾತದಲ್ಲಿ ರೂ.35.11 ಕೋಟಿ ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ರಾಜ್ಯ ಸರ್ಕಾರವೂ ಕೂಡ ಅರ್ಧ ಪಾಲು ಕೊಡಬೇಕಾಗಿತ್ತು. ಈ ಅನುದಾನದಲ್ಲಿ ಮೇಲುಸೇತುವೆಯಲ್ಲಿ 2 ಲೇನ್ ರಸ್ತೆ ನಿರ್ಮಾಣ ಆ ಕಡೆ 2.5 ಅಡಿ ಪಾದಚಾರಿ ರಸ್ತೆ, ಮತ್ತು ಸೇತುವೆ ಕೆಳಗೆ ಎರಡೂ ಕಡೆ ಅಗಲದ ಸರ್ವೀಸ್ ರಸ್ತೆ ನಿರ್ಮಾಣ ಮಾಡುವ ಉದ್ದೇಶವಿತ್ತು, ಆದ ಮೇಲುಸೇತುವೆ ನಿರ್ಮಾಣ ಮಾಡಲು ಬೇಡಿಕೆ ಬಂದ ಹಿನ್ನಲೆಯಲ್ಲಿ ಅದಕ್ಕೆ ಎಕರೆಯಷ್ಟು ಭೂಮಿ ಮತ್ತು ಭೂ-ಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರ ನಿಮಯ ಆದರೆ, ಭೂ ಸ್ವಾಧೀನದ ಹಣವನ್ನು ನೀಡಲು ರಾಜ್ಯ ಸರ್ಕಾರ ಯಾ ನಿರ್ಧಾರಕ್ಕೆ ಬರಲು ವಿಳಂಭ ನೀತಿ ಅನುಸರಿಸಿದ ಕಾರಣ ಹಲವು ವರ್ಷ ಯೋಜನೆ ನೆನೆಗುದಿಗೆ ಬಿದ್ದಿತ್ತು. ಚಿತ್ರದುರ್ಗದಿಂದ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ಬರುವ ಈ ರೈಲ್ವೆ ಗೇಟ್ ಬರುವ ಸಮಯದಲ್ಲಿ ಒಂದು ದಿನದಲ್ಲಿ ಕನಿಷ್ಠ 30 ಬಾರಿ ಮುಚ್ಚಲ್ಪಡುತ್ತದೆ.
ಪ್ರ ತಿಬಾರಿ ಸುಮಾರು 8 ರಿಂದ 10 ನಿಮಿಷಗಳ ಕಾಲ ಎರಡೂ ಕಡೆಯಿಂದ ವಾಹನಗಳು ನಿಲುಗಡೆಯಾಗಿ ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಅನಾನುಕೂಲದ ಜೊತೆಗೆ ಕಿರಿಕಿರಿಯುಂಟಾಗುತ್ತಿತ್ತು. ಇದನ್ನು ಮನಗಂಡ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಲು ನಿರಾಕರಿಸಿದ ಮೇಲೆ ರೈಲ್ವೆ ಸಚಿವ ಒತ್ತಡ ಹೇರಿ ಇಲ್ಲಿನ ವಾಸ್ತವ ಸ್ಥಿತಿಯನ್ನು ಹಾಗೂ ವಾಹನ ಸವಾರರ ಪರದ ಸಚಿವರಿಗೆ ಮನದಟ್ಟು ಮಾಡಿಕೊಡಲಾಗಿತ್ತು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ ಸಚಿವರು ಮೇಲುಸೇತುವೆಗಳ ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚವನ ಇಲಾಖೆಯಿಂದಲೇ ಭರಿಸಲು ಸಮ್ಮತಿಸಿದ್ದಾರೆ.
ಚಿತ್ರದುರ್ಗ ನಗರ ಪರಿಮಿತಿಯಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಬಿಡುಗಡೆಯ ರೂ.78.66 ಕೋಟಿ ಅನುದಾನದಲ್ಲಿ 4 ಪಥದ ಮೇಲುಸೇತುವೆ ನಿರ್ಮಾಣ, ಮೇಲೆ ಎರಡೂ ಕಡೆ 3 ಅಡಿ ಪಾದಚಾರಿ ರಸ್ತೆ, ಮತ್ತು ಸೇತುವೆ ಕೆಳಗೆ ಎರ 5.5 ಮೀಟರ್ ಅಗಲದ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುತ್ತ ಗ್ರೇಡಿಯಂಟ್ನಲ್ಲಿ ಸೇತುವೆ ನಿರ್ಮಾಣವಾಗಲಿದ್ದು, ಈಗ 30 ಮೀಟರ್ ಅಗ ಮಾತ್ರ ಲಭ್ಯವಿದ್ದು, ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಭೂಮಿ ಬೇಕಾದಲ್ಲಿ ರಾಜ್ಯ ಭೂ-ಸ್ವಾಧೀನ ಮಾಡಿಕೊಡಬೇಕಾಗಿದೆ, ಭೂ-ಸ್ವಾಧೀನಕ್ಕೆ ತಗುಲುವ ವೆಚ್ಚವನ್ನು ಇಲಾಖೆಯೇ ಭರಿಸಲಿದೆ ಎಂದು ತಿಳಿಸಿದರು.
ಇತ್ತೀಚಿಗೆ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಚಿತ್ರದುರ್ಗ ಲೋಕಸಭಾಕ್ಷೇತ್ರ ವ್ಯಾಪ್ತಿಯ ಪ್ರಸ್ಥಾವನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇದರ ಫಲವಾಗಿ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಈ ಪಸ್ಥಾನವನೆಗೆ ಕ್ಲಿಯರೆನ್ಸ್ ನೀಡಲಾಗಿದೆ. ಚಿತ್ರದುರ್ಗ ಲೊಕಸಭಾಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕೆಲಸಕ್ಕೆ ರೂ. 562.53 ಕೋಟಿ ಮೊತ್ತಕ್ಕೆ ಕ್ಲಿಯರೆನ್ಸ್ ನೀಡಿದ ಮುಂದಿನ ಒಂದು ವಾರದೊಳಗೆ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ರೂ. 562.53 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಿದ್ದಾರೆ ಎಂದು ಸಂಸದರು ತಿಳಿಸಿದರು.
ಗೋಷ್ಟಿಯಲ್ಲಿನ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಬಿಜೆಪಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ಖಂಜಾಚಿ ಮಾಧುರಿ ಗೀರೀಶ್, ವಕ್ತರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷರಾದ ನಾಗರಾಜ್ ಮುಖಂಡರಾದ ಕುಮಾರಸ್ವಾಮಿ, ಮಹಿಳಾ ಸದಸ್ಯೆ ಬಸಮ್ಮ ಹಾಜರಿದ್ದರು.