ಬೆಂಗಳೂರು: ನಾಲ್ವರು ಎಂಎಲ್ಸಿ ಸ್ಥಾನಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಕೃತ ಮುದ್ರೆ ಒತ್ತಿದ್ದಾರೆ.!
ಆಯ್ಕೆ ಆದವರು ಮೂವರು ಆರು ವರ್ಷಗಳ ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2026ರ ಜುಲೈ 21 ರವರೆಗೆ ರಮೇಶ್ ಬಾಬು ಎಂಎಲ್ಸಿ ಆಗಿರುತ್ತಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾಗಿರುವ ರಮೇಶ್ ಬಾಬು, ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಹುಬ್ಬಳ್ಳಿ –ಧಾರವಾಡ ಮೂಲದ ಕಾಂಗ್ರೆಸ್ ಮುಖಂಡ ಎಫ್.ಹೆಚ್. ಜಕ್ಕಪ್ಪನವರ, ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಅವರಿಗೆ ಎಂಎಲ್ಸಿಗಳಾಗಿ ನಾಮನಿರ್ದೇಶನ ಮಾಡಲಾಗಿದೆ.!