ಚಿತ್ರದುರ್ಗ : ಶಿಕ್ಷಣದಿಂದ ಆರ್ಥಿಕ ಸಮಾನತೆ ಹೆಚ್ಚುತ್ತದೆ ಶಿಕ್ಷಣವು ಜೀವನದ ಗುರಿ ಬದಲಾಯಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್ ಶ್ರೀನಿವಾಸ್ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಗೂಳಯ್ಯನಹಟ್ಟಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ನಡೆದ ಗುರುವಂದನ ಕಾರ್ಯಕ್ರಮ ಹಾಗೂ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣದಿಂದ ಆರ್ಥಿಕ ಸಮಾನತೆ ಹೆಚ್ಚುತ್ತದೆ ಶಿಕ್ಷಣವು ಜೀವನದ ಗುರಿ ಬದಲಾಯಿಸುತ್ತದೆ ಶಿಕ್ಷಣದಿಂದ ವ್ಯಕ್ತಿತ್ವ ಸಾಮಾಜಿಕ ನಾಯಕತ್ವ ಬೌದ್ಧಿಕ ವಿಕಾಸನದ ಜೊತೆ ಸ್ಥಿತಿ ಗತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ.
25 ವರ್ಷಗಳಿಂದ ಈ ಶಾಲೆಯು ಉತ್ತಮ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಶ್ರಮವಹಿದ್ದಾರೆ. ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಶಿಕ್ಷಕ ಮಿತ್ರರು ಮತ್ತು ಸಿಬ್ಬಂದಿಗಳು ಉತ್ತಮ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಉಜ್ಜಲವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ್ ರೆಡ್ಡಿ ಪ್ರಾಂಶುಪಾಲರು ವಹಿಸಿ ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಹೊಳಲ್ಕೆರೆಯ ಕ್ಷೇತ್ರ ಸಮನ್ವಯಧಿಕಾರಿ ಎಸ್ . ಸುರೇಂದ್ರನಾಥ್. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಕುಂತಲಾ.ಹಿರಿಯ ಶಿಕ್ಷಕರುಗಳಾದ ಎಸ್ ಟಿ ಮಾಲಿಂಗಪ್ಪ ನಾಗರಾಜ್. ಶೇಖರ್. ಹಿರಿಯ ವಿದ್ಯಾರ್ಥಿಗಳಾದ ಭಾನುಮೂರ್ತಿ ಯತೀಶ್. ಮಧು. ನವೀನ್ . ಆದರ್ಶ. ಬಸವರಾಜ್. ಅರವಿಂದ್. ಇನ್ನು ಅನೇಕ ಹಳೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳು ಉಪಸ್ಥಿತರಿದ್ದರು.

































