ಬೆಳಗಾವಿ : ಸಿಎಂ ಸಿದ್ದರಾಮಯ್ಯ ಸದನಕ್ಕೆ ಸುಳ್ಳು ಹೇಳಿದ್ದಾರೆ. ಇಂತಹ ಸಿಎಂ ನಾನು ನೋಡಿಲ್ಲ ಅಂತ ಸಿಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ವಿಧಾನ ಪರಿಷತ್ ಕಲಾಪದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕಲಾಪದ ಪ್ರಶ್ನೋತ್ತರ ಅವಧಿ ವೇಳೆ ಗ್ರಂಥಾಲಯಗಳ ಬಗ್ಗೆ ವಿಶ್ವನಾಥ್ ಪ್ರಶ್ನೆ ಕೇಳಿದ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದರು. ಈ ವೇಳೆ ಸಿಎಂ ವಿರುದ್ದ ವಾಗ್ದಾಳಿ ನಡೆಸಿದ ವಿಶ್ವನಾಥ್ ಅವರು, ಪಂಚಮಸಾಲಿ ಮೀಸಲಾತಿ ಸಂಬಂಧ ಸಿಎಂ ಸಿದ್ದರಾಮಯ್ಯ ಸದನಕ್ಕೆ ಉತ್ತರ ಕೊಡುವ ವೇಳೆ SCSP-TSP ಗೆ ಇಡೀ ದೇಶದಲ್ಲಿ ಕೇಂದ್ರ ಸರ್ಕಾರ 60 ಸಾವಿರ ಕೋಟಿ ರೂ. ಮಾತ್ರ ಕೊಟ್ಟಿರುವುದು ಅಂತ ಹೇಳಿದ್ರು. SCSP-TSP ತಾನೇ ದೇಶದಲ್ಲಿ ತಂದಿದ್ದೇನೆ ಅಂತ ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುತ್ತಾರೆ. ಸಿಎಂ ಮೊನ್ನೆ ಉತ್ತರ ಕೊಟ್ಟಿದ್ದು ನೋಡಿದೆ. SCSP-TSP ಹಣ ಸ್ವತಂತ್ರ ಬಂದಾಗಿನಿಂದ ಇದೆ. ಸಿಎಂ ಸಿದ್ದರಾಮಯ್ಯ ಎಷ್ಟು ಸುಳ್ಳು ಹೇಳ್ತಾರೆ ಎಂದು ಕಿಡಿಕಾರಿದರು.
ಕೇಂದ್ರದ ಬಜೆಟ್ ಓದದೇ ಇದ್ದರೆ ಇವರು ಇವರು ಎಂತಹ ಮುಖ್ಯಮಂತ್ರಿ. ಸಿಎಂ ಸದನಕ್ಕೆ ಸುಳ್ಳು ಹೇಳಬಾರದು. ಸಿದ್ದರಾಮಯ್ಯ ಸದನದಲ್ಲಿ ಸುಳ್ಳು ಹೇಳಿದ್ದಾರೆ.ಕೇಂದ್ರ ಸರ್ಕಾರ SCSP-TSPಗೆ 2.60 ಲಕ್ಷ ಕೋಟಿ ರೂ. ರಿಲೀಸ್ ಮಾಡಿದೆ. ಇದು ಗೊತ್ತಿಲ್ಲದೆ ಸುಮ್ಮನೆ ಮಾತಾಡೋದು ಎಷ್ಟು ಸರಿ ಎಂದು ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.