ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು ಮೊದಲ ಲಘು ಯುದ್ಧ ವಿಮಾನ (LCA) ತೇಜಸ್ ಅವಳಿ ಆಸನಗಳ ತರಬೇತಿ ಆವೃತ್ತಿಯ ವಿಮಾನವನ್ನು ಭಾರತೀಯ ವಾಯುಪಡೆಗೆ (IAF) ಬುಧವಾರ ಹಸ್ತಾಂತರಿಸಿದೆ.
LCA ತೇಜಸ್ ಅವಳಿ ಆಸನವು ಹಗುರವಾದ, ಎಲ್ಲಾ ಹವಾಮಾನದ ಹೊಂದಿಕೊಳ್ಳುವ ಮಲ್ಟಿಪಲ್ ರೋಲ್‌ನ 4.5 ಪೀಳಿಗೆಯ ವಿಮಾನವಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮುಖ್ಯಸ್ಥರು ಎಲ್ ಸಿಎ ಮಾದರಿ ವಿಮಾನವನ್ನು ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯಸಚಿವ ಅಜಯ್ ಭಟ್ ಅವರಿಗೆ ಹಸ್ತಾಂತರಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು.
ನಂತರ ಮಾತನಾಡಿದ ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಅಜಯ್ ಭಟ್ ಅವರು, ‘ಇಂದು ಐತಿಹಾಸಿಕ ದಿನವಾಗಿದ್ದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿರು ಮತ್ತು ಇಲ್ಲಿ ಮಾಡಿದ ಎಲ್ಲಾ ಒಪ್ಪಂದಗಳಿಗೆ ಸಾಕ್ಷಿಯಾಗಲು ನಾನು ತುಂಬಾ ಹೆಮ್ಮೆಪಡುತ್ತೇನೆ. ನಾವು ಮೊದಲ LCA ಟ್ವಿನ್-ಸೀಟರ್ ಅನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದ್ದೇವೆ. ಕೆಲವು ವರ್ಷಗಳ ಹಿಂದೆ ನಾವು ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೆವು’ ಎಂದು ಹೇಳಿದ್ದಾರೆ