ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿಯ ಮುದ್ದಾದ ಮಗಳು ತ್ರಿದೇವಿ ಪೊನ್ನಕ್ಕ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ್ದಾರೆ. ಈ ಖುಷಿಯನ್ನು ತಮ್ಮ ಜಾಲತಾಣದಲ್ಲಿ ಹರ್ಷಿಕಾ ಹಾಗೂ ಭುವನ್ ಹಂಚಿಕೊಂಡಿದ್ದಾರೆ.
ನಟ ಭುವನ್ ಹಾಗೂ ನಟಿ ಹರ್ಷಿಕಾ ತಮ್ಮ ಕಂದಮ್ಮನ ಜೊತೆ ಎರಡು ವಾರಗಳಲ್ಲಿ ಮೂರು ದೇಶ ಸುತ್ತಿದ್ದಾರೆ. ಎಂಟು ತಿಂಗಳ ತ್ರಿದೇವಿ ವಿಯೆಟ್ನಾಂ, ಶ್ರೀಲಂಕಾ, ಥೈಲ್ಯಾಂಡ್ ಸುತ್ತಾಡಿ ಬಂದಿದ್ದಾಳೆ.
ವಿದೇಶ ಸುತ್ತಿದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುದ್ದಾದ ಮಗು ನೋಡಿ ನೆಟ್ಟಿಗರು, ಆಪ್ತರು ಶುಭ ಹಾರೈಕೆ ತಿಳಿಸಿದ್ದಾರೆ.