ಮುಂಬೈ: ಪ್ರೊ ಕಬಡ್ಡಿ ಲೀಗ್-2024ರ ಫೈನಲ್ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಅನ್ನು ಸೋಲಿಸಿ ಹರ್ಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ ಸೀಸನ್ 11 ಅನ್ನು ಗೆದ್ದುಕೊಂಡಿದೆ. ಈ ಮೂಲಕ ತನ್ನ ಚೊಚ್ಚಲ ಟ್ರೋಫಿಗೆ ಹರ್ಯಾಣ ಸ್ಟೀಲರ್ಸ್ ಮುತ್ತಿಕ್ಕಿದೆ.
ಪುಣೆಯ ಬಾಲೆವಾಡಿಯ ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಭಾನುವಾರ ನಡೆದ ಪ್ರೊ ಕಬಡ್ಡಿ ಲೀಗ್-2024ರ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಸೀಸನ್ 32-23 ರಿಂದ ಪಾಟ್ನಾ ಪೈರೇಟ್ಸ್ ಅನ್ನು ಸೋಲಿಸಿದೆ.
ಮನ್ಪ್ರೀತ್ ಸಿಂಗ್ ನೇತೃತ್ವದ ಕಬಡ್ಡಿ ತಂಡವು ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ ಒಂಬತ್ತು ಅಂಕಗಳ ಅಂತರದಿಂದ ಜಯಗಳಿಸಿದೆ. ಹರ್ಯಾಣದ ಶಿವಂ ಪತಾರೆ ಅವರು ಪಂದ್ಯದಲ್ಲಿ ಒಟ್ಟು 9 ಅಂಕಗಳನ್ನು ಗಳಿಸಿದ್ದು, ಇದು ಪ್ರೊ ಕಬಡ್ಡಿ ಲೀಗ್ ನಲ್ಲಿ ತಂಡವು ಮುನ್ನಡೆ ಸಾಧಿಸಲು ನೆರವಾಗಿದೆ. ಹರಿಯಾಣ ಸ್ಟೀಲರ್ಸ್ ಗೆಲುವಿಗಾಗಿ 3 ಕೋಟಿ ರೂಪಾಯಿ ಬಹುಮಾನ ಪಡೆದಿದೆ.