ಪುದಿನಾ ದಿನನಿತ್ಯದ ಆಹಾರದಲ್ಲಿ ಬಳಕೆಯಾಗುವ ಒಂದು ಸೊಪ್ಪು ಮಾತ್ರವಲ್ಲ. ಇದು ಅಡುಗೆಯ ರುಚಿ ಹೆಚ್ಚಿಸುವುದರ ಜತೆಗೆ ಒಳ್ಳೆಯ ಸುವಾಸನೆ ನೀಡುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ಬಳಕೆಯಾಗುವ ಎಷ್ಟೋ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಮಹತ್ವ ಹೊಂದಿರುತ್ತವೆ. ಅಂತಹ ಪದಾರ್ಥಗಳಲ್ಲಿ ಪುದಿನಾ ಸಹ ಒಂದು.
ಬಾಯಿಯ ಕೆಟ್ಟ ವಾಸನೆ ತಡೆಯುತ್ತದೆ: ಪುದಿನಾದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರ ಪ್ರಮುಖ ಆರೋಗ್ಯ ಗುಣಗಳಲ್ಲಿ ಒಂದು. ಕೆಲವು ಪುದಿನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಇದು ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.
ಅಜೀರ್ಣ ನಿವಾರಣೆ: ನೀವು ಅಜೀರ್ಣದಿಂದ ಬಳಲುತ್ತಿದ್ದರೆ, ಪುದಿನಾ ಎಲೆಗಳಿಂದ ನಿಮಗೆ ಸಹಾಯವಾಗುತ್ತದೆ. ಪುದಿನಾ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುತ್ತದೆ.
ಶ್ವಾಸಕೋಶದ ರೋಗ ತಡೆಯುವುದು: ನಿಮಗೆ ಕೆಲವೊಮ್ಮೆ ಉಸಿರಾಡಲು ತುಂಬಾ ಕಷ್ಟವಾಗುತ್ತಿದೆ ಎಂದಾದರೆ ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಇದರಲ್ಲಿ ರೊಸ್ಮರಿನಿಕ್ ಆಮ್ಲವಿದೆ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾದ್ದು, ಫ್ರೀ ರ್ಯಾಡಿಕಲ್ ಅನ್ನು ತಟಸ್ಥಗೊಳಿಸುವುದು ಮತ್ತು ಉರಿಯೂತದ ರಾಸಾಯನಿಕವನ್ನು ನಿರ್ಬಂಧಿಸುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಬಳಸಿಕೊಂಡರೆ ಉಸಿರಾಟದ ಸಮಸ್ಯೆ ನಿವಾರಣೆಯಾಗುವುದು.
ತೂಕ ಕಡಿಮೆಡ ಮಾಡಿಕೊಳ್ಳಲು: ಪುದಿನಾ ತುಂಬಾ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುವಂತಹ ಗಿಡಮೂಲಿಕೆಯಾಗಿದ್ದು, ಇದರಲ್ಲಿ ನಾರಿನಾಂಶ ಅಧಿಕವಾಗಿದೆ. ಪುದಿನಾ ಎಲೆಗಳು ಜೀರ್ಣಕ್ರಿಯೆಯ ಕಿಣ್ವಗಳನ್ನು ಉತ್ತೇಜಿಸುವುದು. ಇದರಿಂದ ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ನಿಮಗೆ ತೂಕ ಕಳೆದುಕೊಳ್ಳಬೇಕೆಂಬ ಮನಸ್ಸಿದ್ದರೆ ಪುದೀನಾವನ್ನು ದೈನಂದಿನ ಆಹಾರದಲ್ಲಿ ಬಳಸಿ.
ತಲೆನೋವು ನಿವಾರಿಸುವುದು
ತಲೆನೋವು ನಿವಾರಿಸುವುದುಪುದೀನದಲ್ಲಿ ಇರುವ ಮೆಂಥಾಲ್ ಅಂಶವು ಸ್ನಾಯುಗಳನ್ನು ಸಡಿಲಗೊಳಿಸಿ, ನೋವುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನ ರಸವನ್ನು ಹಣೆಯ ಮೇಲೆ ಅನ್ವಯಿಸಿಕೊಂಡರೆ ತಲೆನೋವು ನಿವಾರಣೆಯಾಗುವುದು. ತಲೆನೋವು ನಿವಾರಣೆಗೆ ಪುದೀನವನ್ನು ಬಳಸಿ ತಯಾರಿಸಲಾದ ಮುಲಾಮು ಅಥವಾ ಎಣ್ಣೆಯನ್ನು ಸಹ ಹಣೆ ಮತ್ತು ಪೀಡಿತ ಪ್ರದೇಶದಲ್ಲಿ ಅನ್ವಯಿಸಿಕೊಳ್ಳಬಹುದು. ಉತ್ತಮವಾದ ಫಲಿತಾಂಶ ನೀಡುವುದು.