ಚಿತ್ರದುರ್ಗ: ಸಂವಿಧಾನ ಮತ್ತು ಸರ್ಕಾರದ ಮುಖ್ಯ ಗುರಿ ಶಾಲಾ ಕಾಲೇಜು ಹಂತದ ವಿದ್ಯಾರ್ಥಿಗಳು ದೈಹಿಕ-ಮಾನಸಿಕವಾಗಿ ಸದೃಢರಾಗಿರಬೇಕು ಎಂಬುದಾಗಿದೆ ಎಂದು ಚಿತ್ರದುರ್ಗ ತಾಲೂಕು ರಾಷ್ಟ್ರೀಯ ಬಾಲ ಸ್ವಾಸ್ಥ್ಯಯ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ ಮಹೇಂದ್ರಕುಮಾರ ಅಭಿಪ್ರಾಯ ಪಟ್ಟರು.
ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆರೋಗ್ಯ ತಪಾಸಣೆ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು
ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕ ಆರೋಗ್ಯ ತಪಾಸಣೆ ಕೈಗೊಂಡು ತೀವ್ರತರದ ಖಾಯಿಲೆಗೆ ಒಳಗಾದ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಶಸ್ತçಚಿಕಿತ್ಸೆ ನಡೆಸಿ ಮಕ್ಕಳ ಆರೋಗ್ಯ ವೃಧ್ದಿಗೆ ಅನುವು ಮಾಡಿಕೊಡಲಾಗುವುದು ಎಂದರು
ಜೆಸಿಹಳ್ಳಿಗೊಲ್ಲರಹಟ್ಟಿಯ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಓ ಚಿತ್ತಯ್ಯ ಮಾತನಾಡಿ ಹಳ್ಳಿಗಾಡಿನ ಪೋಷಕರು ತಮ್ಮ ಮಕ್ಕಳಿಗೆ ಬಂದಿರುವ ಖಾಯಿಲೆಗೆ ಮೌಢ್ಯತೆಯ ಕ್ರಮ ಕೈಗೊಂಡು ಮಕ್ಕಳ ಖಾಯಿಲೆ ಉಲ್ಬಣಗೊಳ್ಳಲು ಕಾರಣರಾಗುತ್ತಾರೆ ಇಂದಿನ ಆಧುನಿಕ ಕಾಲದಲ್ಲೂ ಸಹ ವೈದ್ಯರ ಸಲಹೆ ತಿರಸ್ಕರಿಸಿ ಕಂದಾಚಾರಗಳನ್ನು ಆಚರಿಸುತ್ತಿರುವುದು ಆತಂಕದ ಸಂಗತಿ ಕೂಡಲೇ ವೈದ್ಯರ ಸಲಹೆಯಂತೆ ಮಾರಕ ಖಾಯಿಲೆಗಳಿಗೆ ಒಳಗಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು
ಹಿರಿಯ ಶಿಕ್ಷಕ ಎಸ್ ಟಿ ಮಂಜುನಾಥ ಮಾತನಾಡಿ ಗ್ರಾಮದ ವಿದ್ಯಾರ್ಥಿಯೊಬ್ಬಳಿಗೆ ಹೃದಯ ಸಂಬAದಿ ಖಾಯಿಲೆಯಿದ್ದು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ ಉಳಿದಂತೆ ಮರ‍್ನಾಲ್ಕು ಮಕ್ಕಳಿಗೆ ಕಣ್ಣಿನ ತೊಂದರೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ ಮಕ್ಕಳ ಪೋಷಕರನ್ನೂ ಕರೆಸಿ ಉಚಿತ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದ್ದೇವೆ ಎಂದರು
ಇದೇ ವೇಳೆ ಶಾಲೆಯ ಒಂದರಿAದ ಏಳನೇ ತರಗತಿಯ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು
ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾ ಮಹೇಂದ್ರಕುಮಾರ, ಡಾ ಸುಪ್ರಿತಾ, ನೆತ್ರಸಹಾಯಕ ರಾಘವೇಂದ್ರ, ದಾದಿ ಪೂಜಾ, ಮುಖ್ಯಶಿಕ್ಷಕ ಒ ಚಿತ್ತಯ್ಯ, ಶಿಕ್ಷಕರಾದ ಎಸ್ ಟಿ ಮಂಜುನಾಥ, ಓ ಶಾರದಾ, ವಿ ಶರಣಪ್ಪ, ಪಿ ಮೇಘಾ, ಅಡುಗೆ ಸಿಬ್ಬಂದಿ ಸರೋಜಾ, ತಿಪ್ಪಮ್ಮ, ವಿದ್ಯಾರ್ಥಿಗಳಾದ ಬಿಂದುಶ್ರೀ ಮನೋಹರ, ಗೌರಮ್ಮ, ಗೌತಮಿ, ಟಿ ಲಕ್ಷ್ಮಿ, ಎಸ್ ಆಕಾಶ, ಎಸ್ ದೀಕ್ಷಾ, ಯಶವಂತ, ಜೀವಿತಾ, ಶಾಲೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು