ಚಿತ್ರದುರ್ಗ: ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಉತ್ತಮವಾದ ಕೆಲಸವನ್ನು ಮಾಡುತ್ತಿದೆ, ಮುಂದಿನ ದಿನದಲ್ಲಿ ನಾನು ಸಹಾ ಇದರ ಸದಸ್ಯನಾಗಿ ಕೆಲಸವನ್ನು ಮಾಡುತ್ತೇನೆ, ಕಷ್ಟದಲ್ಲಿ ಇರುವವರಿಗೆ ಸಹಾಯವನ್ನು ಮಾಡುತ್ತೆನೆ ಎಂದು ರಾಜ್ಯದ ಕಾರ್ಮಿಕ ಸಚಿವರು, 2025ನೇ ಸಾಲಿನ ಜೀವ ರಕ್ಷಕ ಪ್ರಶಸ್ತಿ ಪುರಸ್ಕøತರಾದ ಎಸ್.ಸಂತೋಷ ಲಾಡ್ ತಿಳಿಸಿದರು.
ಚಿತ್ರದುರ್ಗ ನಗರದ ವಾಲ್ಮೀಕಿ ಭವನದಲ್ಲಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ವತಿಯಿಂದ ಹಮ್ಮಿಕೊಂಡಿದ್ದ ಮಂಗಳವಾರ 2025ನೇ ಸಾಲಿನ ಜೀವರಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಯುವ ಜನತೆ ಬಹಳಷ್ಟು ಸಮಯವನ್ನು ಫೇಸುಬುಕ್, ಮಾಟ್ಸ್ಪ್, ಟ್ವೀಟರ್, ಇನ್ಟ್ಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲ ಕಳೆಯಲಾಗುತ್ತಿದ್ದಾರೆ ಇದರಿಂದ ನಿಮ್ಮ ಸಮಯ ಹಾಗೂ ಬುದ್ದಿ ಹಾಳಾಗುತ್ತದೆ ಇದರ ಬದಲು ಈ ಸಮಯವನ್ನು ನಿಮ್ಮ ಪ್ರಗತಿಗೆ ಪೂರಕವಾದ ಕೆಲಸವನ್ನು ಮಾಡಿಕೊಳ್ಳಿ ಸಂವಿಧಾನ ನಿಮಗೆ ಎಲ್ಲಾ ರೀತಿಯಾದ ಸಹಾಯವನ್ನು ಮಾಡಿದೆ ಅದನ್ನು ಓದುವುದರ ಮೂಲಕ ನಿಮ್ಮ ಪಾಲಿಗೆ ಬಂದಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ತಿಳಿಯಿರಿ ಇದು ಮುಂದೆ ನಿಮಗೆ ಉಪಯೋಗಕ್ಕೆ ಬರುತ್ತದೆ ಎಂದು ಸಚಿವರು ಯುವ ಜನತೆಗೆ ತಿಳಿ ಹೇಳಿದರು.
ಈ ಪ್ರಶಸ್ತಿಗೆ ನಾನು ಎಷ್ಟು ಅರ್ಹನೋ ಗೊತ್ತಿಲ್ಲ, ಕಷ್ಟದ ಸಮಯದಲ್ಲಿ ನನ್ನ ಕೈಯಲಾದ ಸಹಾಯವನ್ನು ಮಾಡಿದ್ದೇನೆ ಇದನ್ನು ಗುರುತಿಸಿ ಇಷ್ಟೊಂದು ದೊಡ್ಡದಾದ ರೀತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಮ್ಮ ದೊಡ್ಡ ಗುಣವಾಗಿದೆ. ನಿಮ್ಮ ಟ್ರಸ್ಟ್ ಉತ್ತಮವಾದ ಕೆಲಸವನ್ನು ಕಳೆದ 10 ವರ್ಷಗಳಿಂದ ಮಾಡುತ್ತಾ ಬಂದಿದೆ. ಮುಂದಿನ ದಿನದಲ್ಲಿ ನಿಮ್ಮ ಟ್ರಸ್ಟ್ ಜೊತೆಯಲ್ಲಿ ಸೇರಿ ನಾನು ಸಹಾ ಸ್ವಯಂ ಸೇವಕನಾಗಿ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ ಸಂತೋಷ ಲಾಡ್ ದೇಶದಲ್ಲಿ ಕನ್ನಡಿಗರು ಕಷ್ಟದಲ್ಲಿ ಸಿಲಿಕಿದಾಗ ಅವರಿಗೆ ಸಹಾಯವನ್ನು ಮಾಡುವುದು ನನ್ನ ಕರ್ತವ್ಯವಾಗಿದೆ ಅದನ್ನು ಮಾಡಿದ್ದೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸಿರಿಗೆರೆ ಶಾಖಾ ಮಠದ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಮ್ಮ ಆರ್ಶೀವಚನದಲ್ಲಿ ಮಾನವನಲ್ಲಿ ನಾನು ಎಂಬುದನ್ನು ಬಿಡಬೇಕಿದ ಎಲ್ಲಿ ನಾನು ನಾನು ಎಂಬುದು ಇರುತ್ತದೆಯೋ ಅಲ್ಲಿಯವರೆಗೂ ಭಗವಂತ ಸಹಾ ದೂರ ಇರುತ್ತಾನೆ, ಭಗವಂತನ ಒಲುಮೆಯನ್ನು ಪಡೆಯಬೇಕಾದರೆ ನಿಸ್ವಾರ್ಥವಾದ ಸಮಾಜ ಸೇವೆಯನ್ನು ಮಾಡಬೇಕಿದೆ ಆಗ ಮಾತ್ರ ಭಗವಂತನ ಕುರುಣೆ ದೂರಕಲು ಸಾಧ್ಯವಿದೆ. ಈ ಹಿಂದೆ ಜನರಲ್ಲಿ ಅಜ್ಞಾನ ಇತ್ತು ಆದರೆ ಜೀವ ರಕ್ಷಕ ಮನೋಭಾವ ಇತ್ತು ಆದರೆ ಇಂದಿನ ದಿನದಲ್ಲಿ ಜನರಲ್ಲಿ ಜ್ಞಾನ ಇದೆ ಆದರೆ ಜೀವಿಗಳ ಬಗ್ಗೆ ಗೌರವ ಇಲ್ಲವಾಗಿದೆ. ಇದ್ದಲ್ಲದೆ ಮಾನವನ ಬಗ್ಗೆಯೂ ಸಹಾ ಗೌರವ ಇಲ್ಲದ ವಾತಾವರಣದಲ್ಲಿ ನಮ್ಮ ಬದುಕು ಸಾಗುತ್ತಿದೆ. ಇಂದಿನ ದಿನಮಾನದಲ್ಲಿ ಜೀವವನ್ನು ರಕ್ಷಣೆ ಮಾಡಬೇಕಾದ ಮನುಷ್ಯ ಜೀವವನ್ನು ಭಕ್ಷಣೆ ಮಾಡುವಂತ ಕಾರ್ಯಕ್ಕೆ ಕೈಹಾಕಿದ್ದಾನೆ. ಮನುಷ್ಯತ್ವ ಮರೆಯಾಗಿದೆ, ಮಾನವ ಮೃಗಕ್ಕಿಂತ ಕೀಳಾಗಿದ್ದಾನೆ, ಇದರಿಂದ ಮನುಷ್ಯನಿಗೆ ಬೆಲೆ ಬರಲು ಸಾಧ್ಯವಿಲ್ಲ ಎಂದರು.
ಸಮಾಜ ಸೇವೆಯಲ್ಲಿ ಇರುವಂತ ಸಂತೃಪ್ತಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ, ಆದರೆ ಇಂದಿನ ದಿನದಲ್ಲಿ ಸೇವೆಯ ಹೆಸರಿನಲ್ಲಿ ಸ್ವಾಹ ಮಾಡುವಂತ ಜನರು ಎಲ್ಲಾ ಕ್ಷೇತ್ರದಲ್ಲಿಯೂ ಸಹಾ ಹೆಚ್ಚಾಗಿದ್ದಾರೆ. ಅದು ರಾಜಕೀಯ,ಧಾರ್ಮಿಕ,ಸಾಮಾಜಿಕ ಶೈಕ್ಷಣಿಕ ಅವರಿಗೆ ಸಾಮಾಜಿಕ ನೆಲೆಗಟ್ಟು ಇಲ್ಲದಿರುವುದು ಕಾರಣವಾಗಿದೆ. ಮಾನವನಿಗೆ ಸಂಸ್ಕಾರವನ್ನು ನೀಡಿದಾಗ ಮನೆಯಲಿ,್ಲ ಮಠದಲ್ಲಿ ಸಮಾಜದಲ್ಲಿ ನೀಡಿದಾಗ ಅವರು ಸೇವೆಯನ್ನು ಸ್ವಾಹ ಎಂದು ತಿಳಿಯದೆ ಅದೊಂದು ಜವಾಬ್ದಾರಿ ಕರ್ತವ್ಯ ಎಂದು ತಿಳಿಯುವುದರ ಮೂಲಕ ಸಂತೋಷ ಲಾಡ್ರವರು ಆರ್ಥಿಕವಾಗಿ ಸಬಲರಾಗಿರುವುದರ ಮೂಲಕ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ, ಜೀವ ರಕ್ಷಕ ಟ್ರಸ್ಟ್ನ ಪದಾಧಿಕಾರಿಗಳು ನಿಜವಾದ ಸಮುದಾಯದ ಅಮೂಲ್ಯವಾದ ರತ್ನಗಳು, ಸಂಘಗಳು ಸ್ಥಾಪನೆ ಉದ್ದೇಶವೇ ಸಮಾಜ ಸೇವೆಯಾಗಿದೆ, ಆದರೆ ಇಂದಿನ ದಿನದಲ್ಲಿ ಈ ಉದ್ದೇಶವನ್ನು ಮರೆಯ ಲಾಗಿದೆ. ಇದಕ್ಕೆ ಆಪಾವಾದ ಎನ್ನುವಂತೆ ಈ ಟ್ರಸ್ಟ್ ಉತ್ತಮವಾದ ಕೆಲಸವನ್ನು ಮಾಡುತ್ತಿದೆ. ಇಂದಿನ ದಿನಮಾನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೆಲಸ ಮಾಡಿದೆ ಅದರ ಹತ್ತರಷ್ಟು ಪ್ರಚಾರವನ್ನು ಬಯಸುವವರ ಸಂಖ್ಯೆ ಹೆಚ್ಚಾಗಿದೆ. ಅಂತಹದರಲ್ಲಿ ಈ ಟ್ರಸ್ಟ್ ಉತ್ತಮವಾದ ಕೆಲಸವನ್ನು ಮಾಡಿದರು ಸಹಾ ಪ್ರಚಾರವನ್ನು ಬಯಸದೇ ತನ್ನ ಪಾಲಿನ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮ್ಮಿನಮಟ್ಟು ಉದ್ಘಾಟನೆಯನ್ನು ಮಾಡಿದರು. ಸಂಜೀವಿನಿ ಜೀವರಕ್ಷಕ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾದ ರಂಗಸ್ವಾಮಿ ಇಂಗಳದಾಳ್, ಸಂಸ್ಥಾಪಕ ಕಾರ್ಯದರ್ಶಿ ಡಾ.ಸೌಮ್ಯ ಮಂಜುನಾಥ್, ಡಿಸಿಸಿ ಅಧ್ಯಕ್ಷ ತಾಜ್ಪೀರ್, ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿಯ ಉಪಾಧ್ಯಕ್ಷರಾದ ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷರಾದ ಎಂವೇದಮೂರ್ತಿ ಬೀಮಸಮುದ್ರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ತೊಡರನಾಳ್, ರಾಜ್ಯ ಸಮಿತಿ ಸದಸ್ಯರಾದ ಸಿದ್ದರಾಜು ನಾಯಕ ಸಮಾಜದ ಪೃಧಾನ ಕಾರ್ಯದರ್ಶಿ ಮಂಜುನಾಥ್, ಪ್ರಾದೇಶೀಕ ಸಾರಿಗೆ ಅಧಿಕಾರಿ ಭರತ್ ಕಾಳಿಸಿಂಗ್, ಮುಬಾರಕ್, ಡಾ.ಸುದೀಪ್ ಹನುಮಂತಪ್ಪ ಗೋಡೆಮನೆ ಖಾಸಿಂಆಲಿ ಸೇರಿದಂತೆ ಇತರರು ಭಾಗವಹಿಸಿದ್ದರು.
































