ಪತಿ ಮಹಾಶಯನೊಬ್ಬ ತನ್ನ ಹೆಂಡತಿಯ ಕಣ್ಣುಗುಡ್ದೆಗಳನ್ನೇ ಕಿತ್ತು ವಿಕೃತ ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಶಿವಪುರಿಯ ಪೊಹ್ರಿ ಪ್ರದೇಶದಲ್ಲಿ ಚೋಟು ಖಾನ್ ಎಂಬಾತ ತನ್ನ ಪತ್ನಿ ಮೇಲೆ ಅನುಮಾನಗೊಂಡು ಈ ಕೃತ್ಯವೆಸಗಿದ್ದಾನೆ.
ಚೋಟು ಖಾನ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ, ಸದಾ ಕಾಲ ಪತ್ನಿ ಜೊತೆ ಅನಗತ್ಯವಾಗಿ ಅನುಮಾನಗೊಂಡು ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಪತ್ನಿಗೆ ನಿನ್ನ ಮೊಬೈಲ್ ಕೊಡು ಎಂದು ಕೇಳಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದಾಳೆ. ಇಷ್ಟಕ್ಕೇ ಕೋಪಗೊಂಡು ಮನ ಬಂದಂತೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ಆತನ ಕೋಪ ತಣ್ಣಗಾಗಿಲ್ಲ.ಚಾಕುವಿನಿಂದ ಪತ್ನಿಯ ಎರಡೂ ಕಣ್ಣುಗುಡ್ಡೆಗಳನ್ನು ಕಿತ್ತಿದ್ದಾನೆ. ಪತ್ನಿಯ ಖಾಸಗಿ ಅಂಗಗಳನ್ನು ಗಾಯಗೊಳಿಸಿದ್ದಾನೆ. ರಕ್ತದ ಮಡುವಲ್ಲಿ ಬಿದ್ದ ಪತ್ನಿಯ ಚೀರಾಟ, ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಬರುತ್ತಿದ್ದಂತೆ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಪತಿಗಾಗಿ ಹುಡುಕಾಟ ನಡೆಸಿದ್ದಾರೆ.