ಮದುವೆ ಮುಗಿಸಿ ಸುಸ್ತಾಗಿ ತನ್ನ ಪತಿಯ ಮನೆಗೆ ಬಂದ ವಧುವಿನ ಬಳಿ ಅನುಮಾನಗೊಂಡ ವರ ಪ್ರೆಗ್ನೆನ್ಸಿ ಕಿಟ್ ಬಳಸಿ ಗರ್ಭಧಾರಣೆ ಟೆಸ್ಟ್ ಮಾಡಲು ಹೇಳಿದ್ದಾನೆ. ಇದರಿಂದ ವಧು ವರನ ಕುಟುಂಬದವರ ನಡುವೆ ಜಗಳ ನಡೆದಿದೆ.
ನವಜೋಡಿಯೊಂದು ಮದುವೆ ಮುಗಿಸಿ ವಧು ಮೊದಲ ಬಾರಿಗೆ ತನ್ನ ಅತ್ತೆಯ ಮನೆಗೆ ತಲುಪಿದಾಗ, ಸುಸ್ತು ಆಯಾಸದಿಂದಾಗಿ ಅವಳಿಗೆ ತಲೆಸುತ್ತು ಬಂದಿತ್ತು. ಇದನ್ನು ನೋಡಿದ ವರನು ಅನುಮಾನಗೊಂಡು ತನ್ನ ಸ್ನೇಹಿತರ ಬಳಿ ಹೇಳಿದ್ದಾನೆ. ಸ್ನೇಹಿತರು ಇದು ಗರ್ಭಧಾರಣೆಯ ಲಕ್ಷಣವಾಗಿರಬಹುದು ಎಂದು ಹೇಳಿದ್ದಾರೆ.
ವರನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅದೇ ಕೂಡಲೇ ಮೆಡಿಕಲ್‍ನಿಂದ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಅನ್ನು ತಂದು ತನ್ನ ಹೆಂಡತಿಗೆ ಕೊಟ್ಟು ಟೆಸ್ಟ್ ಮಾಡುವಂತೆ ಹೇಳಿದ್ದಾನೆ. ಕಿಟ್ ನೋಡಿದ ತಕ್ಷಣ ವಧು ಕೋಪಗೊಂಡು ಕೂಡಲೇ ತನ್ನ ಹೆತ್ತವರ ಮನೆಗೆ ಕರೆ ಮಾಡಿ ತನ್ನ ಅತ್ತಿಗೆಗೆ ಇಡೀ ವಿಷಯವನ್ನು ಹೇಳಿದ್ದಾಳೆ. ಸ್ವಲ್ಪ ಸಮಯದೊಳಗೆ, ವಧುವಿನ ಕುಟುಂಬವು ಅವಳ ಅತ್ತೆಯ ಮನೆಗೆ ಬಂದಿದೆ. ಈ ಬಗ್ಗೆ ಎರಡು ಕುಟುಂಬಗಳ ನಡುವೆ ದೊಡ್ಡ ಗಲಾಟೆ ನಡೆಯಿತು. ಜಗಳ ವಿಕೋಪಕ್ಕೆ ಹೋದಾಗ ಗ್ರಾಮದ ಕೆಲವರು ಮಧ್ಯಪ್ರವೇಶಿಸಿ ಪಂಚಾಯತಿ ಕರೆದಿದ್ದಾರೆ.
ಸುಮಾರು ಎರಡು ಗಂಟೆಗಳ ಕಾಲ ಪಂಚಾಯತ್ ಸಭೆ ನಡೆಸಿದರು. ಪಂಚಾಯತ್‌ನಲ್ಲಿ, ವರನಿಗೆ ತನ್ನ ಮೇಲೆ ಅನುಮಾನವಿದೆ, ಆದ್ದರಿಂದ ತಾನು ಅವನೊಂದಿಗೆ ಸಂಸಾರ ನಡೆಸುವುದಿಲ್ಲ ಎಂದು ವಧು ಆರೋಪಿಸಿದ್ದಾಳೆ. ಅದೇ ಸಮಯದಲ್ಲಿ, ವರನು ಯಾವುದೇ ಕೆಟ್ಟ ಉದ್ದೇಶದಿಂದ ಇದನ್ನು ಮಾಡಿಲ್ಲ, ಆದರೆ ತನ್ನ ಸ್ನೇಹಿತರ ಹೇಳಿದ್ದಕ್ಕೆ ಅಜ್ಞಾನದಿಂದ ಅಂತಹ ನಿರ್ಧಾರ ತೆಗೆದುಕೊಂಡೆ ಎಂದು ಸ್ಪಷ್ಟಪಡಿಸಿದನು. ಅಂತಿಮವಾಗಿ, ವರನು ಸಾರ್ವಜನಿಕವಾಗಿ ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಅಂತಹ ತಪ್ಪು ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾನೆ. ಇದರ ನಂತರ, ವಿಷಯ ಶಾಂತವಾಯಿತು ಮತ್ತು ಎರಡೂ ಕುಟುಂಬಗಳು ರಾಜಿ ಮಾಡಿಕೊಂಡವು.